ಮಂಗಳೂರು: ಹೈಡ್ರೋವೀಡ್ ಗಾಂಜಾ ಮಾರಾಟ ಯತ್ನ; ವೈದ್ಯೆ ಸೇರಿ ಇಬ್ಬರ ಬಂಧನ

Prasthutha|

ಪ್ರಮುಖ ಆರೋಪಿ ವೈದ್ಯ ವಿದೇಶಕ್ಕೆ ಪರಾರಿ ಶಂಕೆ

- Advertisement -

ಮಂಗಳೂರು: ದೇರಳಕಟ್ಟೆಯಲ್ಲಿ ಹೈಡ್ರೋವೀಡ್ ಗಾಂಜಾ ಮಾರಾಟ ಯತ್ನ ನಡೆಸಿದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಾಸರಗೋಡು ಮಂಗಲ್ಪಡಿ ನಿವಾಸಿ ಅಜ್ಮಲ್ ಟಿ, ತಮಿಳುನಾಡ್ ಮೂಲದ ಸುರತ್ಕಲ್ ನಿವಾಸಿ ಮಿನು ರಶ್ಮಿ ಗುರುತಿಸಲಾಗಿದೆ.

- Advertisement -

ಆರೋಪಿಗಳು ಕೊಣಾಜೆ, ಉಳ್ಳಾಲ, ಉಪ್ಪಳ, ಮಂಗಳೂರು ಭಾಗದಲ್ಲಿ ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, 30 ಲಕ್ಷದಿಂದ 1 ಕೋಟಿ ಬೆಲೆ ಬಾಳುವ 1ಕೆ.ಜಿ 236 ಗ್ರಾಂ ಹೈಡ್ರೋವೀಡ್ ಗಾಂಜಾ ವಶಕ್ಕೆ ಪಡೆಯಲಾಗಿದೆ.

ತನಿಖೆಯಿಂದ ಪ್ರಕರಣದ ಪ್ರಮುಖ ಆರೋಪಿ ಡಾ. ನದೀರ್ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಲಭಿಸಿದೆ. ಪ್ರಕರಣ ಆರೋಪಿಯಾದ ಮಿನು ರಶ್ಮಿ ಕಾಞಂಗಾಡ್ ಹರಿಮಲ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುದು ಬೆಳಕಿಗೆ ಬಂದಿದೆ.

ಇನ್ನೂ ಈಕೆ ಡಾ ನದೀರ್, ಅಜ್ಮಲ್ ನೊಂದಿಗೆ ಸ್ನೇಹ ಬೆಳೆಸಿ ಕಾಞಂಗಾಡ್ ನಿಂದ ರೈಲು ಮೂಲಕ 29ರಂದು ಮಂಗಳೂರಿಗೆ ಬಂದಿದ್ದು, ಡಾ ನದೀರ್ ಸೂಚನೆಯಂತೆ ಇಬ್ಬರು ದೇರಳಕಟ್ಟೆ ಭಾಗದ ಆತನ ಸ್ನೇಹಿತರಿಗೆ ಹೈಡ್ರೋವೀಡ್ ಗಾಂಜಾ ನೀಡಲು ಮುಂದಾಗಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಕಾರು, ಮೊಬೈಲ್ ಫೋನುಗಳನ್ನು ವಶಪಡಿಸಲಾಗಿದೆ. ಇಕೋನಾಮಿಕ್ ಆ್ಯಂಡ್ ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



Join Whatsapp