ಉತ್ತರ ಪ್ರದೇಶದ ಗೋಶಾಲೆಯಲ್ಲಿ ಹಸಿವಿನಿಂದ 6 ಹಸುಗಳು ಸಾವು, 12 ಅಸ್ವಸ್ಥ

Prasthutha|

► ಮೇವಿಗಾಗಿ ಹಣ ಬಿಡುಗಡೆ ಮಾಡದ ಸರ್ಕಾರ

- Advertisement -

ಉತ್ತರ ಪ್ರದೇಶ: ಉತ್ತರ ಪ್ರದೇಶದ ಎತವಾ ಜಿಲ್ಲೆಯ ಪರೌಲಿ ರಾಮಯಾನ್ ಜಿಲ್ಲೆಯ ಗೋಶಾಲೆಯೊಂದರಲ್ಲಿ ಸಮರ್ಪಕ ನಿರ್ವಹಣೆಯಿಲ್ಲದ ಕಾರಣ ಹಾಗೂ ಹಸಿವಿನಿಂದ 6 ಹಸುಗಳು ಸಾವನ್ನಪ್ಪಿದ್ದು, ಇತರ 12 ಹಸುಗಳು ಅಸ್ವಸ್ಥಗೊಂಡಿವೆ.
ಸೋಮವಾರ ‘ಗೋ ಶಾಲೆ’ಗೆ ಸ್ಥಳೀಯ ನಿವಾಸಿಗಳು ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ 1,000 ಕ್ಕೂ ಹೆಚ್ಚು ಜಾನುವಾರುಗಳಿದ್ದು, ಅವುಗಳಲ್ಲಿ ಆರು ಹಸುಗಳು ಸಾವನ್ನಪ್ಪಿದ್ದರೆ, 12 ಹಸು ಅನಾರೋಗ್ಯದಿಂದ ಬಳಲುತ್ತಿವೆ ಎಂದು ಆರೋಪಿಸಿದ್ದಾರೆ.

ತಕ್ಷಣ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಪಶುವೈದ್ಯಕೀಯ ತಂಡವನ್ನು ಗೋಶಾಲೆಗೆ ಕಳುಹಿಸಿ ಸತ್ತ ಹಸುಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಸೂಚಿಸಲಾಯಿತು ಎಂದು ಸರ್ಕಾರ ತಿಳಿಸಿದೆ.
“ಜಿಲ್ಲಾ ಪಶು ವೈದ್ಯ ಅಧಿಕಾರಿಯವರು ಗೋಶಾಲೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಹಾಗೂ ಈ ಸಂಬಂಧ ವರದಿ ನೀಡುವಂತೆ ಸೂಚಿಸಲಾಗಿದೆ. ಯಾವ ಕಾರಣದಿಂದ ಹಸುಗಳ ಸಾವನ್ನಪ್ಪಿವೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇಟವಾ ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ಥ್ ಮಾಹಿತಿ ನೀಡಿದ್ದಾರೆ.

- Advertisement -

ಈ ಗೋಶಾಲೆಯ ನಿರ್ವಹಣೆಯನ್ನು ಸಂಕತ್ ಮೋಚನ್ ಬಾಲಾಜಿ ದೇವಸ್ಥಾನದವರು ಮಾಡುತ್ತಿದ್ದರು. ಆಹಾರದ ಕೊರತೆಯಿಂದ ಹಸುಗಳು ಸಾಯುತ್ತಿವೆ ಎಂದು ಗೋಶಾಲೆಯಲ್ಲಿ ಕೆಲಸ ಮಾಡುತ್ತಿರುವವರು ಆರೋಪಿಸಿದ್ದಾರೆ.ಹಸುಗಳಿಗೆ ಆಹಾರ ನೀಡಲು ಮತ್ತು ಅದರ ನಿರ್ವಹಣೆಗೆ ಅಧಿಕಾರಿಗಳು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಶಂಕಟ್ ಮೋಚನ್ ಬಾಲಾಜಿ ದೇವಸ್ಥಾನದ ವ್ಯವಸ್ಥಾಪಕ ಮನೀಶ್ ಯಾದವ್ ಪತ್ರೆ ಆರೋಪಿಸಿದ್ದಾರೆ.


ಗೋಶಾಲೆಯಲ್ಲಿ 1,000 ಕ್ಕೂ ಹೆಚ್ಚು ಹಸುಗಳಿವೆ. ಬ್ಲಾಕ್ ಅಭಿವೃದ್ಧಿ ಕಚೇರಿಯಿಂದ ನಮಗೆ ಹಣ ಬಂದಿಲ್ಲ. ಹಣದ ಕೊರತೆಯ ಬಗ್ಗೆ ಫೆಬ್ರವರಿಯಲ್ಲಿಯೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಹೇಳಿದರು.

Join Whatsapp