ಮಂಗಳೂರು | ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ: ಮಹಿಳೆ ಬಂಧನ

Prasthutha|

ಮಂಗಳೂರು: ನಗರದ ಮಾರ್ಗನ್ಸ್ ಗೇಟ್ ಬಳಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರ್ ಜಹಾನ್ ಎಂಬ ಮಹಿಳೆಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಪತ್ನಿ ವಿಜಯಲಕ್ಷ್ಮೀಯನ್ನು  ಮತಾಂತರಕ್ಕೆ ಒತ್ತಾಯಿಸಿದ್ದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ನಗರದ ಮಾರ್ಗನ್ಸ್ ಗೇಟ್ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನಾಗೇಶ್ ಶೇರಿಗುಪ್ಪ (30) ತನ್ನ ಪತ್ನಿ ವಿಜಯಲಕ್ಷ್ಮೀ (26), ಮಕ್ಕಳಾದ ಸಪ್ನಾ (8) ಮತ್ತು ನಾಲ್ಕು ವರ್ಷದ ಸಮರ್ಥ್ ಅವರಿಗೆ ಆಹಾರದಲ್ಲಿ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದರು.

- Advertisement -

ಆತನ ಮನೆಯಲ್ಲಿ ಸಿಕ್ಕಿದ ಡೆಟ್ ನೋಟ್ ನಲ್ಲಿ, ನೂರ್ ಜಹಾನ್ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಐಪಿಸಿ ಸೆಕ್ಷನ್ 306 ಪ್ರಕರಣ ದಾಖಲಾಗಿದೆ.



Join Whatsapp