ಮಂಗಳೂರು | ವೈದ್ಯಕೀಯ ಲೋಕದಲ್ಲಿ ಗಾಂಜಾ: ಮತ್ತೆ 9 ಮಂದಿ ಅರೆಸ್ಟ್

Prasthutha|

- Advertisement -

ಮಂಗಳೂರು: ವೈದ್ಯ ವಿದ್ಯಾರ್ಥಿಗಳ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಮತ್ತೆ 9 ಮಂದಿಯನ್ನು ಬಂಧಿಸಿದ್ದಾರೆ.

ಡಾ. ಸಿದ್ದಾರ್ಥ್ ಪಾವಸ್ಕರ್, ಡಾ. ಸೂರ್ಯಜಿತ್ ದೇವ್, ಡಾ. ಪ್ರಣಯ್ ನಟರಾಜ್, ಡಾ. ಚೈತನ್ಯ ತುಮುಲುರಿ, ಡಾ. ಸುಧೀಂದ್ರ, ಡಾ. ಇಶ್ ಮಿಡ್ಡಾ, ಡಾ. ವಿದುಷ್ ಕುಮಾರ್, ಡಾ. ಶರಣ್ಯಾ, ಡಾ. ಆಯಿಷಾ ಮುಹಮ್ಮದ್ ಬಂಧಿತ ಆರೋಪಿಗಳು. ಇವರೆಲ್ಲರೂ ಕೆಎಂಸಿ ವೈದ್ಯಕೀಯ ಕಾಲೇಜು, ಶ್ರೀನಿವಾಸ್ ಆಸ್ಪತ್ರೆ, ದುರ್ಗಾ ಸಂಜೀವಿನಿ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಪಡೆಯುತ್ತಿದ್ದಾರೆ. ಡಾ. ಶರಣ್ಯಾ ಬಿಡಿಎಸ್ ವಿದ್ಯಾರ್ಥಿನಿಯಾಗಿದ್ದರೆ, ಉಳಿದವರು ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಬಂಧಿತರಲ್ಲಿ ಇಬ್ಬರು ವೈದ್ಯರು, 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ



Join Whatsapp