ಮಂಗಳೂರು | ಎಂಟು ಅಡಿ ಎತ್ತರದಿಂದ ಬಿದ್ದ ಆ್ಯಂಬುಲೆನ್ಸ್: ಬೈಕ್‍ ಗಳಿಗೆ ಹಾನಿ

Prasthutha|

ಮಂಗಳೂರು:  ಆಂಬ್ಯುಲೆನ್ಸ್ ರಿವರ್ಸ್ ತೆಗೆಯುವ ವೇಳೆ ರಸ್ತೆ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದು ಬೈಕ್ ಗಳ ಮೇಲೆ ಬಿದ್ದಿರುವ ಘಟನೆ ನಗರದ ಫಳ್ನೀರ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

- Advertisement -

ಆ್ಯಂಬುಲೆನ್ಸ್ ನಲ್ಲಿ ಚಾಲಕ ಮಾತ್ರ ಇದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಸ್ಪತ್ರೆ ಸಮೀಪದ ರಸ್ತೆಯಲ್ಲಿ ರಿವರ್ಸ್ ತೆಗೆಯುವಾಗ ಸುಮಾರು ಎಂಟು ಅಡಿ ಎತ್ತರದಿಂದ ಆಂಬ್ಯುಲೆನ್ಸ್ ಬಿದ್ದಿದ್ದು, 2ರಿಂದ 3 ಬೈಕ್‍ ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Join Whatsapp