ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಆಪತ್ತು: ಖರ್ಗೆ ಆತಂಕ

Prasthutha|

ಕಲಬುರಗಿ: ಮುಂಬರುವ 2024 ರ ಸಂಸತ್‌ ಚುನಾವಣೆಯಲ್ಲಿ ಈ ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಂವಿಧಾನಕ್ಕೆ ವಿಪತ್ತು ಕಾದಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಆತಂಕ ಹೊರಹಾಕಿದ್ದಾರೆ.

- Advertisement -

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವ ಬಿಜೆಪಿ ಕೇಂದ್ರದಲ್ಲಿ ಮನ ಬಂದಂತೆ ಅಧಿಕಾರ ನಡೆಸುತ್ತಿದೆ. ಇದೇ ಪಕ್ಷ ಮತ್ತೆ 2024ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೇಯಾದರೆ ಸಂವಿಧಾನಕ್ಕೆ ಆಪತ್ತು ನಿಶ್ಚಿತ ಎಂದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವ ಎಲ್ಲ ಪ್ರಯತ್ನ ನಡೆಯಲಿದೆ. ಹೀಗಾಗಿ ಸಂವಿಧಾನ ಬದಲಾಯಿಸುವುದನ್ನು ತಪ್ಪಿಸಲು ಜನರು ಈಗಲಾದರೂ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ ಎಂದು ಖರ್ಗೆ ಹೇಳಿದರು.

- Advertisement -

ಬಲವಂತದ ಮತಾಂತರ ತಡೆಯಲು ಈಗಾಗಲೇ ಭಾರತೀಯ ದಂಡ ಸಂಹಿತೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಇಷ್ಟಿದ್ದರೂ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಜಾರಿಗೆ ತರುತ್ತಿರುವುದನ್ನು ನೋಡಿದರೆ ಬಿಜೆಪಿ ತನ್ನ ಅಜೆಂಡಾ ಹೇಗಾದರೂ ಮಾಡಿ ಕಾರ್ಯರೂಪಕ್ಕೆ ತಂದೇ ತರುತ್ತದೆ ಎಂಬುದಕ್ಕೆ ಸಾಕ್ಷೀಕರಿಸುವಂತಿದೆ ಎಂದು ಟೀಕಿಸಿದರು.

Join Whatsapp