ಮಂಗಳೂರು: ಶಕ್ತಿನಗರ ಮುಗ್ರೋಡಿ ಬ್ರಹ್ಮಲಿಂಗೇಶ್ವರ ದೈವಸ್ಥಾನದಿಂದ ಕಳವು ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಶಿವಮೊಗ್ಗದವನಾಗಿದ್ದು, ಪ್ರಸ್ತುತ ಮರಕಡ ನಿವಾಸಿ ಉಮೇಶ್ (42) ಬಂಧಿತ ಆರೋಪಿ.
ಈತ ದೈವಸ್ಥಾನದ ಗುಡಿಯ ಎರಡು ಬಾಗಿಲಿನ ಬೀಗ ಮುರಿದು ಅಂದಾಜು 50 ಸಾವಿರ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಭಾನುವಾರ ಬೆಳಗ್ಗಿನ ಜಾವ ರಿಕ್ಷಾ ಏರಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.