ಸಂಸದ ಅಸಾದುದ್ದೀನ್ ಉವೈಸಿ ಮನೆ ಧ್ವಂಸ ಪ್ರಕರಣ | ಐವರು ಹಿಂದೂ ಸೇನಾ ಕಾರ್ಯಕರ್ತರ ಬಂಧನ

Prasthutha|

ನವದೆಹಲಿ : ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಉವೈಸಿ ಮನೆಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಹಿಂದೂ ಸೇನಾ ಸಂಘಟನೆಯ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.


ಮಂಗಳವಾರ ಸಂಜೆಯ ವೇಳೆ ದೆಹಲಿಯ ಅಶೋಕ ರಸ್ತೆ ಬಳಿ ಇರುವ ಸಂಸದ ಉವೈಸಿ ಮನೆಗೆ ಹಠಾತ್ತನೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಗೊಳಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ದೀಪಕ್ ಯಾದವ್ ತಿಳಿಸಿದ್ದಾರೆ.

- Advertisement -

ತನ್ನ ಮನೆ ಮೇಲೆ ನಡೆದ ದುಷ್ಕರ್ಮಿಗಳ ದಾಳಿಗೆ ಸಂಬಂಧಿಸಿದಂತೆ ಓವೈಸಿ ದೇಶದಲ್ಲಿ ಸಂಸದರ ಮನೆಗೆ ರಕ್ಷಣೆಯಿಲ್ಲದಿದ್ದರೆ ಗೃಹ ಸಚಿವರೇ ಇದರಿಂದ ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು.

- Advertisement -