ಮಂಗಳೂರು | ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಮೃತ್ಯು

Prasthutha|

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕನೋರ್ವ ಮೃತಪಟ್ಟ  ಘಟನೆ ನಗರದ ಅತ್ತಾವರದಲ್ಲಿ ತಡ ರಾತ್ರಿ ನಡೆದಿದೆ.

- Advertisement -

ಜೆಪ್ಪು ನಿವಾಸಿ ಹಮೀದ್ ಎಂಬವರ ಪುತ್ರ ಅಬ್ದುರಹ್ಮಾನ್ ರಿಲ್ವಾನ್(30 ) ಮೃತಪಟ್ಟವರು ಎಂದು ತಿಳಿದು ಬಂದಿದೆ.

ಅತ್ತಾವರದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ರಾಜಸ್ಥಾನದಿಂದ ಗ್ರಾನೈಟ್ ತುಂಬಿದ ಲಾರಿ ಬಂದಿತ್ತು. ಈ ವೇಳೆ ಕಟ್ಟಡದ ರೈಟರ್ ಆಗಿದ್ದ ರಿಲ್ವಾನ್ ರಲ್ಲಿ ಗ್ರಾನೈಟ್‌ನ ಫೋಟೊ ತೆಗೆಯಲು ಕಟ್ಟಡದ ಸೂಪರ್ ವೈಸರ್ ಸೂಚಿಸಿದ್ದಾರೆ . ಅದರಂತೆ ಫೋಟೊ ತೆಗೆಯಲು ಅವರು ಲಾರಿಯ ಹಿಂಬದಿಗೆ ತೆರಳಿದ್ದು, ಈ ವೇಳೆ ಲಾರಿಯಲ್ಲಿದ್ದ ಗ್ರಾನೈಟ್ ಏಕಾಏಕಿ ರಿಲ್ವಾನ ಮೈಮೇಲೆ ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -

ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp