ಮೋದಿ ಸರ್ಕಾರಕ್ಕೆ ರಾಷ್ಟ್ರವನ್ನು ರಕ್ಷಿಸುವ ಸಾಮರ್ಥ್ಯವಿಲ್ಲ ಎಂದು ಮಣಿಪುರ ದಾಳಿ ತೋರಿಸುತ್ತದೆ: ರಾಹುಲ್ ಗಾಂಧಿ

Prasthutha|

ಹೊಸದಿಲ್ಲಿ: ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ನ  ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ, ಮಾತನಾಡಿದ ರಾಹುಲ್ ಗಾಂಧಿ , ಪ್ರಧಾನಿ ಮೋದಿ ಭಾರತವನ್ನು ರಕ್ಷಿಸಲು ಅಸಮರ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಣಿಪುರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯು ಮೋದಿ ಸರ್ಕಾರಕ್ಕೆ ರಾಷ್ಟ್ರವನ್ನು ರಕ್ಷಿಸುವ ಸಾಮರ್ಥ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹುತಾತ್ಮರಿಗೆ ನನ್ನ ಸಂತಾಪ ಮತ್ತು ಅವರ ಕುಟುಂಬಗಳಿಗೆ ಸಂತಾಪಗಳು. ರಾಷ್ಟ್ರವು ನಿಮ್ಮ ತ್ಯಾಗವನ್ನು ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.

ಅಸ್ಸಾಂ ರೈಫಲ್ಸ್‌ನ ಖುಗಾ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಠಿ, ಅವರ ಪತ್ನಿ ಮತ್ತು ಮಗ ಮತ್ತು ಅರೆಸೈನಿಕ ಪಡೆಯ ನಾಲ್ವರು ಸಿಬ್ಬಂದಿ ಶನಿವಾರ ಬೆಳಿಗ್ಗೆ ಮಣಿಪುರದಲ್ಲಿ ನಡೆದ ಹೊಂಚುದಾಳಿಯಲ್ಲಿ ಹುತಾತ್ಮರಾಗಿದ್ದರು.

Join Whatsapp