ಮಂಗಳೂರು: ಮಂಗಳೂರು ನಗರಕ್ಕೆ ಎರಡು ದಿನಗಳ ಕಾಲ ನೀರು ಪೂರೈಕೆ ವ್ಯತ್ಯಯಗೊಳ್ಳಲಿದ್ದು, ಈ ಕುರಿತು ಮಂಗಳೂರು ಮಹಾ ನಗರ ಪಾಲಿಕೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಏಪ್ರಿಲ್ 27ರಿಂದ 29ರ ಬೆಳಗ್ಗಿನ ತನಕ ತಾಂತ್ರಿಕ ಕಾಮಗಾರಿ ಹಿನ್ನೆಲೆಯಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಮಂಗಳೂರು ಮಹಾ ನಗರ ಪಾಲಿಕೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.
ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ HLPS- 2 -80MLD ತುಂಬೆ ರೇಚಕ ಸ್ಥಾವರದಲ್ಲಿರುವ 1200 ಎಂ.ಎಂ ವ್ಯಾಸದ ಕೊಳವೆ ದುರಸ್ತಿ ಕಾಮಗಾರಿ, LLPS-1 ರಲ್ಲಿ ಪಂಪು ನಂಬ್ರ: 2 ಹೆಡರ್ ಬದಲಾವಣೆ ಕಾಮಗಾರಿ ಹಾಗೂ ಇತರ ಪೂರಕ ಕಾಮಗಾರಿಗಳ ನಿರ್ವಹಿಸಲು ಇರುವುದರಿಂದ ದಿನಾಂಕ: 27-04-2023 ಗುರುವಾರ ಬೆಳಿಗ್ಗೆ ಗಂಟೆ 6.00 ರಿಂದ 29-04-2023 ಶನಿವಾರ ಬೆಳಗ್ಗೆ 6.00 ಗಂಟೆಯವರೆಗೆ 48 ಗಂಟೆ ಅವಧಿಯಲ್ಲಿ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುತ್ತಿದ್ದು ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಸಾರ್ವಜನಿಕರಿಗೆ ತಿಳಿಸಿದ ಮಹಾನಗರ ಪಾಲಿಕೆ, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.