ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಆಭರಣ ಮಳಿಗೆಯಾದ ‘ಸಿಟಿಗೋಲ್ಡ್’ ಮತ್ತು ಆಯಿಷಾಸ್ ಮೇಕ್ ಒವರ್ ಇದರ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಆಯೋಜಿಸಲಾಗಿದ್ದ ಮೆಹಂದಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ‘ಸಿಟಿಗೋಲ್ಡ್’ನಲ್ಲಿ ಶುಕ್ರವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಸಮಾಜ ಪ್ರೋತ್ಸಾಹ ನೀಡಿದರೆ ಮತ್ತಷ್ಟು ಸಾಧಿಸಬಲ್ಲರು ಎಂದರು.
ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಇದರ ಮಾಜಿ ಅಧ್ಯಕ್ಷೆ ಫಮೀದಾ ಇಬ್ರಾಹಿಮ್ ಮಾತನಾಡಿ ಆಭರಣ ಮಳಿಗೆಯು ಮಹಿಳಾ ದಿನಾಚರಣೆಯ ಪ್ರಯುಕ್ತ ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಮೇಕಪ್ ಆರ್ಟಿಸ್ಟ್ ಸಾಜಿದಾ ಹಾರಿಸ್ ಹಾಗು ಆಯಿಷಾ ಮೇಕ್ ಒವರ್‌ನ ಮಾಲಕಿ ಆಯಿಷಾ ಶಹನಾಝ್ ಭಾಗವಹಿಸಿದ್ದರು.
ಮೆಹಂದಿ ಸ್ಫರ್ಧೆಯು ಹಿರಿಯ ಮತ್ತು ಕಿರಿಯ ಎಂಬ ಎರಡು ವಿಭಾಗಗಳಾಗಿ ಏರ್ಪಡಿಸಲಾಗಿತ್ತು. ಹಿರಿಯರ ವಿಭಾಗದಲ್ಲಿ ಅಲ್ಫೀನಾ ಉಪ್ಪಳ ಪ್ರಥಮ ಹಾಗು ಪಲ್ಲವಿ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಕಿರಿಯರ ವಿಭಾಗದಲ್ಲಿ ಕುಬ್ರಾ ಅಫ್ರೀನ್ ಪ್ರಥಮ ಮತ್ತು ಮರಿಯಮ್ ಅಫ್ರಾ ದ್ವಿತೀಯ ಸ್ಥಾನ ಪಡೆದುಕೊಂಡರು. ತೀರ್ಪುಗಾರರಾಗಿ ಸುಸ್ಮಿತಾ, ಮಿಸ್ರಿಯಾ ಹಾಗು ಹಫ್ಸೀನಾ ಸಹಕರಿಸಿದ್ದರು.
ಪ್ರಥಮ ಸ್ಥಾನ ಪಡೆದವರಿಗೆ ವಜ್ರದ ಉಂಗುರ ಹಾಗು ದ್ವಿತೀಯ ಸ್ಥಾನ ಪಡೆದವರಿಗೆ 5,000 ರೂ.ಮೌಲ್ಯದ ಬ್ಯೂಟಿ ಪಾರ್ಲರ್ ಸಾಮಗ್ರಿಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 100 ಮಂದಿಯ ಪೈಕಿ 13 ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು
ಈ ಸಂದರ್ಭ ಸಿಟಿಗೋಲ್ಡ್ ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಸಿಬ್ಬಂದಿ ವರ್ಗ ಹಾಗು ಗ್ರಾಹಕರು ಉಪಸ್ಥಿತರಿದ್ದರು.