ಮಂಗಳೂರು: ‘ಕೆವಾ ಬಾಕ್ಸ್’ ವಜ್ರಾಭರಣ ಮಳಿಗೆಯಲ್ಲಿ ಮಹಿಳಾ ದಿನಾಚರಣೆ

Prasthutha|

- Advertisement -

ಮಂಗಳೂರು: ನಗರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿರುವ ‘ಕೆವಾ ಬಾಕ್ಸ್’ ವಜ್ರಾಭರಣ ಮಳಿಗೆಯಲ್ಲಿ ಮಹಿಳಾ ದಿನ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸನ್‌ಸೈನ್ ಟ್ರಾವೆಲ್ಸ್‌ನ ಮಾಲಕಿ ಸರಿತಾ ಸಂತೋಷ್, ಶಬ್ನಮ್ ಮೇಕ್ ಓವರ್ಸ್ ಮಂಗಳೂರು ಇದರ ಮಾಲಕಿ ಶಬ್ನಮ್, ರೂಪದರ್ಶಿನಿ ಹಾಗು ಸ್ತ್ರೀ ರೋಗ ತಜ್ಞೆ ಡಾ. ಜೆಸ್ಸಿ ಮರಿಯಾ ಗೋವಿಯಸ್ ಡಿಸೋಜ, ಆಸ್ಸೀಯಾಸ್ ಡಿಸೈನ್ ಸ್ಟುಡಿಯೋದ ಮಾಲಕಿ ಯು.ಟಿ. ಆಸಿಯಾ ಇಶ್ರತ್ ಹಾಗು ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಯ ಸ್ಥಾಪಕ ಟ್ರಸ್ಟಿ ಅಲೀಸಾ ಅಮೀನ್ ಭಾಗವಹಿಸಿದ್ದರು.

- Advertisement -

ಈ ಸಂದರ್ಭ ಸಿಟಿಗೋಲ್ಡ್ ಗ್ರೂಪ್‌ನ ಎಜೆಎಂ ಅಜ್ಮಲ್, ‘ಕೆವಾ ಬಾಕ್ಸ್’ನ ಬ್ರಾಂಚ್ ಮ್ಯಾನೇಜರ್ ಶಾನಿಫ್, ಸಿಬ್ಬಂದಿ ವರ್ಗ ಹಾಗು ಗ್ರಾಹಕರು ಉಪಸ್ಥಿತರಿದ್ದರು. ನಿಕಿತಾ ಜಾಸ್ಮಿನ್ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ದಿನಾಚರಣೆಯ ಪ್ರಯುಕ್ತ ಎಲ್ಲ ವಜ್ರಾಭರಣಗಳ ಖರೀದಿಯ ಮೇಲೆ ವಜ್ರದಲ್ಲಿ ಪ್ರತಿ ಕ್ಯಾರೆಟ್‌ನಲ್ಲಿ ಶೇ.40ರಷ್ಟು ಹಾಗು ಚಿನ್ನಾಭರಣ ಖರೀದಿಯ ತಯಾರಿ ಶುಲ್ಕದಲ್ಲಿ ಶೇ.20ರಷ್ಟು ರಿಯಾಯಿತಿ ದೊರೆಯಲಿದೆ. ಈ ರಿಯಾಯಿತಿ ದರವು ಮಾರ್ಚ್ 9 ಮತ್ತು 10ರಂದು ಇರಲಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.



Join Whatsapp