ಮಂಗಳೂರು : ಫುಟ್ ಪಾಟ್ ನಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರ ಮೇಲೆ ಹರಿದ ಕಾರು

Prasthutha|

ಮಂಗಳೂರು: ಫುಟ್ ಪಾಟ್ ನಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರ ಮೇಲೆ ಕಾರು  ಹರಿದ ಘಟನೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ನಡೆದಿದೆ. ಗಾಯಗೊಂಡ ಇಬ್ಬರ ಪೈಕಿ ಓರ್ವನ ಪರಿಸ್ಥಿತಿ ಗಂಭೀರವಾಗಿದೆ.

- Advertisement -

ಹತ್ತರಿಂದ ಹದಿನೈದು ಮಂದಿ ಹೊರರಾಜ್ಯದ ಕಾರ್ಮಿಕರು ಫುಟ್ ಪಾತ್ ನಲ್ಲಿ ಮಲಗಿದ್ದರು ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಸ್ಥಳದಲ್ಲಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದು  ಇಬ್ಬರ ಮೇಲೆ ಕಾರು ಹರಿದಿದೆ.

ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಸ್ಥಳಕ್ಕೆ ಮಂಗಳೂರು ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp