ಮಂಗಳೂರು | ಖಾಸಗಿ ಬಸ್ ಪಲ್ಟಿ: ಹಲವು ಮಂದಿಗೆ ಗಾಯ

Prasthutha|

- Advertisement -

ಮಂಗಳೂರು: ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಆದಿ ಲಕ್ಷ್ಮಿ ಕಂಪನಿಗೆ ಸೇರಿರುವ ನವದುರ್ಗಾ ಎಂಬ ಹೆಸರಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಬಸ್ ಪಲ್ಟಿ ಪರಿಣಾಮ ಹಲವು ಮಂದಿ ಪ್ರಯಾಣಿಕರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

Join Whatsapp