ವಿಮಾನಗಳ ಮಧ್ಯೆ ಡಿಕ್ಕಿ: ಐವರು ಸಜೀವ ದಹನ

Prasthutha|

ಜಪಾನ್: ಏರ್ಲೈನ್ಸ್ ವಿಮಾನ ಮತ್ತು ಸಣ್ಣ ಕೋಸ್ಟ್ ಗಾರ್ಡ್ ವಿಮಾನ ಪರಸ್ಪರ ಡಿಕ್ಕಿ ಹೊಡೆದು ಬೆಂಕಿ ಹೊತ್ತಿ ಉರಿದಿದೆ. ಪರಿಣಾಮವಾಗಿ ಏರ್ಲೈನ್ಸ್ ವಿಮಾನದಲ್ಲಿದ್ದ ಎಲ್ಲಾ 379 ಪ್ರಯಾಣಿಕರು ಮತ್ತು ಸಿಬ್ಬಂದಿ ಪಾರಾಗಿದ್ದಾರೆ. ಆದರೆ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಆರು ಸಿಬ್ಬಂದಿ ಪೈಕಿ ಐವರು ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.

- Advertisement -

ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ವಿಮಾನ ಬೆಂಕಿಯಲ್ಲಿ ಸ್ಫೋಟಗೊಳ್ಳುವುದನ್ನು ಸಾರ್ವಜನಿಕ ಪ್ರಸಾರಕ ಎನ್‌ಎಚ್ಕೆ ತೋರಿಸಿದೆ.

ಇನ್ನು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ದಿಗ್ಭ್ರಮೆ ವ್ಯಕ್ತಪಡಿಸಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

- Advertisement -

Join Whatsapp