ಮಂಗಳೂರು: ಕಾಣೆಯಾಗಿದ್ದ ಬಾಲಕಿಯ ಮೃತದೇಹ ನದಿಯಲ್ಲಿ ಪತ್ತೆ

Prasthutha|

ಮಂಗಳೂರು: ಕಾಣೆಯಾಗಿದ್ದ ಹನ್ನೊಂದು ವರ್ಷ ಪ್ರಾಯದ ಬಾಲಕಿಯ ಮೃತದೇಹ ಮನೆ ಸಮೀಪದ ನದಿಯಲ್ಲಿ ಪತ್ತೆಯಾಗಿದೆ.

- Advertisement -

ಕುದ್ರೋಳಿ ಹೈದರಾಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಪುತ್ರಿ ಮುಫೀದಾ (11) ಮೃತಪಟ್ಟ ಬಾಲಕಿ. ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಲಾಗಿತ್ತು. ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಪರಿಶೀಲಿಸಿದಾಗ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ನದಿ ಕಡೆಗೆ ಹೋಗುತ್ತಿರುವುದು ಕಂಡುಬಂತು. ತಕ್ಷಣ ಸ್ಥಳೀಯ ಯುವಕರು ಕುದ್ರೋಳಿಯ ಕಾರ್ಖಾನೆ ಸಮೀಪದ ನದಿಯಲ್ಲಿ ಶೋಧ ನಡೆಸಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಮುಫೀದಾ ಅಲ್ಪಪ್ರಮಾಣದಲ್ಲಿ ಬುದ್ದಿಮಾಂದ್ಯತೆ ಹೊಂದಿದ್ದು, ಮನೆಯವರು ಕೆಲಸದಲ್ಲಿ ನಿರತರಾಗಿದ್ದಾಗ ಬಾಗಿಲು ತೆಗೆದು ಹೊರಬಂದಿದ್ದಾಳೆ ಎನ್ನಲಾಗಿದೆ.

- Advertisement -

ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕುದ್ರೋಳಿಯ ನಡುಪಳ್ಳಿ ಕಬರ್ ಸ್ಥಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಸ್ಥಳೀಯ ಕಾರ್ಪೊರೇಟರ್ ಸಂಶುದ್ದೀನ್ ತಿಳಿಸಿದ್ದಾರೆ.   

Join Whatsapp