ಮಂಗಳೂರು | ಹಲ್ಲೆ ಪ್ರಕರಣ: ತಂದೆ, ಮಗ ಬಂಧನ

Prasthutha|

ಮಂಗಳೂರು: ಬೋಳೂರು ಜಾರಂದಾಯ ದೇವಸ್ಥಾನದ ಬಳಿ ಮಂಗಳವಾರ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ದೇವದಾಸ್ ಬೋಳೂರು (61) ಮಗ ಸಾಯಿ ಕಿರಣ್ (21) ಬಂಧಿತ ಆರೋಪಿಗಳಾಗಿದ್ದು, ಗಾಯಗೊಂಡ ನವೀನ್ ಸಾಲ್ಯಾನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನವೀನ್ ಸಾಲ್ಯಾನ್ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

- Advertisement -


ಹಲ್ಲೆಗೆ ಹಳೆಯ ದ್ವೇಷವೇ ಕಾರಣ ಎಂದು ತಿಳಿದು ಬಂದಿದೆ.



Join Whatsapp