ಭದ್ರಾವತಿ: ಕಾರು ಕದಿಯುವ ಪ್ರಯತ್ನ ವಿಫಲವಾದಾಗ, ಕಳ್ಳತನಕ್ಕೆ ಬಂದ ವ್ಯಕ್ತಿ ಕಾರಿಗೆ ಬೆಂಕಿ ಹಚ್ಚಿದ ಘಟನೆ ತಾಲೂಕಿನ ತಿಪ್ಲಾಪುರ ಕ್ಯಾಂಪ್ನಲ್ಲಿ ನಡೆದಿದೆ.
ತಿಪ್ಲಾಪುರ ಕ್ಯಾಂಪ್ ನಿವಾಸಿ ಬಷೀರ್ ಎಂಬವರಿಗೆ ಸೇರಿದ ಕಾರಿಗೆ ಬೆಂಕಿ ಹಚ್ಚಲಾಗಿದೆ. ನಿನ್ನೆ ರಾತ್ರಿ ಕಳ್ಳತನಕ್ಕೆ ಬಂದಿದ್ದ ಅಲೀಂ ಎಂಬಾತ ಕಾರಿನ ಡೋರ್ ತೆಗೆಯಲು ಮುಂದಾಗುತ್ತಿದ್ದಾಗ ಕಾರಿನ ಸೈರನ್ ಮೊಳಗಿದೆ.
ಮನೆಯವರು ಹೊರ ಬರುವ ಹೊತ್ತಿಗೆ ಕಳ್ಳತನಕ್ಕೆ ಬಂದಿದ್ದಆರೋಪಿ ಅಲೀಂ ಪ್ಲಾಸ್ಟಿಕ್ ಬಳಸಿ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಕಾರಿನ ಕೆಲವು ಭಾಗಗಳು ಸುಟ್ಟು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.