1,300 ಕೋಟಿ ಮೌಲ್ಯದ ಏರ್‌ಪೋರ್ಟ್ ಗಳು ಕೇವಲ 500 ಕೋಟಿ ರೂ.ಗೆ ಅದಾನಿಗೆ ಮಾರಾಟ!

Prasthutha|

ಹೊಸದಿಲ್ಲಿ: ವಿಮಾನಯಾನ ಪ್ರಾಧಿಕಾರ ನೌಕರರ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, 1,300 ಕೋಟಿ ರೂಪಾಯಿ ಬೆಲೆ ಬಾಳುವ ಮಂಗಳೂರು, ಲಕ್ನೋ, ಅಹಮದಾಬಾದ್ ಏರ್‌ಪೋರ್ಟ್ ನ್ನು ಕೇವಲ 500 ಕೋಟಿ ರೂಪಾಯಿ ಉದ್ಯಮಿ ಗೌತಮ್ ಅದಾನಿಗೆ ಮಾರಲಾಗಿದೆ ಎಂದು ಆರೋಪ ಮಾಡಿದೆ.

- Advertisement -

`ವಿಮಾನಯಾನ ಸಚಿವಾಲಯದ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕಾಗಿ ಪಿಪಿಪಿಎಸಿಯಿಂದ ಅನುಮತಿ ಕೇಳುವ ವೇಳೆ ಮೂರು ವಿಮಾಣ ನಿಲ್ದಾಣಗಳ ಮೌಲ್ಯ 1,300 ಕೋಟಿ ರೂಪಾಯಿ ಇತ್ತು. ಆದರೆ ಅದಾನಿ ಕಂಪನಿಗೆ ಕೇವಲ 500 ಕೋಟಿ ರೂಪಾಯಿಗೆ ಮಾರಲಾಯಿತು’ ಎಂದು ಅಕ್ಟೋಬರ್ 2ರಂದು ಬರೆದಿರುವ ಪತ್ರದಲ್ಲಿ ಆರೋಪಿಸಿರುವುದಾಗಿ ಪ್ರಮುಖ ಇಂಗ್ಲೀಷ್ ದೈನಿಕ ‘ದಿ ಹಿಂದೂ’ ವರದಿ ಮಾಡಿದೆ.

ಭಾರತೀಯ ಏರ್‌ಪೋರ್ಟ್ ಪ್ರಾಧಿಕಾರ ಸ್ಥಾಪನೆ ಆದ ಇದೇ ಮೊದಲ ಬಾರಿಗೆ ಪ್ರಾಧಿಕಾರ ಭಾರೀ ನಷ್ಟ ಅನುಭವಿಸಿದೆ. ಈ ಆರ್ಥಿಕ ವರ್ಷದಲ್ಲಿ ಪ್ರಾಧಿಕಾರಕ್ಕೆ 2,814 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. 2020ರ ಸಾಲಿನ ಆರ್ಥಿಕ ವರ್ಷದಲ್ಲಿ 1,985 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು, ಈ ನಷ್ಟದಿಂದಾಗಿ ಪ್ರಾಧಿಕಾರದ ನೌಕರರಿಗೆ ಜುಲೈನಿಂದ ಆರು ತಿಂಗಳವರೆಗೆ ಸಂಬಳ ಕಡಿತ ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.



Join Whatsapp