ಮಂಗಳೂರು: ಅಪಘಾತದಿಂದ ಪಾದಚಾರಿ ಮಹಿಳೆಯನ್ನು ರಕ್ಷಿಸಿದ್ದ ಖಾಸಗಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲು

Prasthutha|

ಮಂಗಳೂರು: ಅಪಘಾತದಿಂದ ಪಾದಚಾರಿ ಮಹಿಳೆಯನ್ನು ರಕ್ಷಿಸಿದ್ದ ಖಾಸಗಿ ಬಸ್ ಚಾಲಕನ ವಿರುದ್ಧ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

- Advertisement -

ಜೂನ್ 20ರಂದು ಮಧ್ಯಾಹ್ನ ಮುಡಿಪು ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದ ಗೋಪಾಲಕೃಷ್ಣ ಹೆಸರಿನ ಖಾಸಗಿ ಬಸ್‌ಗೆ ಮಹಿಳೆ ಅಡ್ಡ ಬಂದ ಘಟನೆ ತೌಡುಗೋಳಿ ಕ್ರಾಸ್ ನಲ್ಲಿ ನಡೆದಿತ್ತು. ಮಹಿಳೆ
ಅಡ್ಡ ಬಂದಿದ್ದು ಕೂಡಲೇ ಗಮನಿಸಿದ ಚಾಲಕ ನಾಗರಾಜ್ ಬಸ್ಸನ್ನು ಬದಿಗೆ ಸರಿಸಿ ನಿಲ್ಲಿಸಿದ್ದರು. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಗರಾಜ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ವಿಡಿಯೋದಲ್ಲಿ ಬಸ್ ವೇಗವಾಗಿ ಬರುತ್ತಿರುವುದು ದಾಖಲಾಗಿದ್ದು, ಅದನ್ನು ಗಮನಿಸದ ಪೊಲೀಸರು ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೆಂದು ಹೇಳಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಆ ಬಸ್ಸನ್ನು ಸೀಜ್ ಮಾಡಿ ಠಾಣೆಗೆ ತಂದು ಇರಿಸಿದ್ದಾರೆ.

- Advertisement -

ಚಾಲಕನ ವಿರುದ್ಧ ಸೆಕ್ಷನ್ 279, 336 ಐಪಿಸಿ ಜೊತೆಗೆ ಮೋಟಾರು ವಾಹನ ಕಾಯ್ದೆ 211-2 ಪ್ರಕಾರ ಪ್ರಕರಣ ದಾಖಲಾಗಿದೆ.