ಮಂಡ್ಯ: ತಾಯಿ- ಮಗ ಆತ್ಮಹತ್ಯೆ

Prasthutha|

ಮಂಡ್ಯ: ಅಭಿನವ ಭಾರತಿ ಶಾಲೆಯ ನಿವೃತ್ತ ಶಿಕ್ಷಕಿ ವೀಣಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದ್ದು, ಇಂದು ವೀಣಾ ಅವರ ಮಗ ನಿತೀನ್ ಅವರ ಶವ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ.

- Advertisement -


ನಗರದ ಕ್ರಿಶ್ಚಿಯನ್ ಕಾಲೋನಿಯ ಎರಡನೇ ಕ್ರಾಸ್ ಮನೆಯಲ್ಲಿ ನಿವೃತ್ತ ಶಿಕ್ಷಕಿ ವೀಣಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದು, ಮಗ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಸೋಮವಾರ ಬೆಳಿಗ್ಗೆ ವೀಣಾ ಅವರ ಮಗ ನಿತಿನ್ ಅವರ ಮೃತದೇಹ ಮಂಡ್ಯ ನಗರದ ಸಮೀಪವಿರುವ ವಿ.ಸಿ. ಫಾರಂ ಗೇಟ್ ಬಳಿಯ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ. ಈತ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ.


ತಾಯಿ ಕೊಲೆಗೈದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಅಥವಾ ತಾಯಿಯ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎನ್ನುವ ಸತ್ಯ ತನಿಖೆಯಿಂದ ತಿಳಿಯಬೇಕಿದೆ.

Join Whatsapp