ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಪ್ರಿಯಕರನೊಡನೆ ಸೇರಿ ತಾಯಿಯನ್ನೇ ಕೊಂದ ಮಗಳು

Prasthutha|

ಗ್ವಾಲಿಯರ್: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ತನ್ನ ಪ್ರಿಯಕರನೊಡನೆ ಸೇರಿ ಮಗಳೇ ತಾಯಿಯನ್ನು ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಗಾಡಿಯಾಪುರ್ ನಲ್ಲಿ ನಡೆದಿದೆ.

- Advertisement -


17 ವರ್ಷದ ಅಪ್ರಾಪ್ತ ಮಗಳು ಹಾಗೂ 25 ವರ್ಷದ ಪ್ರಿಯಕರ ಸೇರಿ ಮನೆಯಲ್ಲಿ ತರಕಾರಿ ಕತ್ತರಿಸುವ ಚಾಕು ಬಳಸಿ ಹತ್ಯೆ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಗ್ವಾಲಿಯರ್ ಎಸ್ಪಿ ಅಮಿತ್ ಸಂಘಿ ತಿಳಿಸಿದ್ದಾರೆ.


ಬಾಲಕಿ ಹಾಗೂ ಯುವಕನ ಪ್ರೇಮ ಸಂಬಂಧಕ್ಕೆ ಬಾಲಕಿಯ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ಮೂರು ತಿಂಗಳ ಹಿಂದೆ ಇಬ್ಬರೂ ಓಡಿ ಹೋಗಿದ್ದರು. ನಂತರ ಬಾಲಕಿಯನ್ನು ಪತ್ತೆ ಹಚ್ಚಿ ತಾಯಿ ಬಳಿ ಕಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp