ಅಂಕೋಲ: ವಾಹನ ಅಪಘಾತದಲ್ಲಿ ಮಂಜೇಶ್ವರ ನಿವಾಸಿ ಮೃತ್ಯು
Prasthutha: January 12, 2022

ಅಂಕೋಲ: ವಾಹನ ಅಪಘಾತವಾಗಿ ಮಂಜೇಶ್ವರದ ನಿವಾಸಿಯೊಬ್ಬರು ಮೃತಪಟ್ಟಿರುವ ಘಟನೆ ಅಂಕೋಲದಲ್ಲಿ ನಡೆದಿದೆ.
ಪಾವೂರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಬೂಬಕರ್ ಯಾನೆ ಅನ್ಸಾರ್ (27) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಇನ್ನು ಇವರ ಸ್ನೇಹಿತರಾದ ಇಸಾಕ್, ಉಪ್ಪಳ ನಿವಾಸಿ ಶರೀಫ್ ಎಂಬವರು ಗಂಭೀರ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
