ಟೆಕ್ಸಾಸ್: ಸೋಂಕು ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿ ರ್ಯಾಲಿ ನಡೆಸಿದ್ದ ವ್ಯಕ್ತಿ ಕೋವಿಡ್ ಸೋಂಕಿಗೇ ಬಲಿಯಾದ ಘಟನೆ ಟೆಕ್ಸಾಸ್ನಲ್ಲಿ ನಡೆದಿದೆ.
ಸೋಂಕಿಗೆ ಬಲಿಯಾದ ವ್ಯಕ್ತಿಯನ್ನು ಕ್ಯಾಲೆಬ್ ವಾಲೇಸ್ ಎಂದು ಗುರುತಿಸಲಾಗಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರು ಸುಮಾರು 1ತಿಂಗಳುಗಳ ಕಾಲ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು ಎನ್ನಲಾಗಿದೆ.
2020ರ ಜುಲೈ 4ರಂದು ಸ್ಯಾನ್ ಎಂಜೇಲೋದಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ವಿವಿಧ ಕೊರೊನಾ ಸಂಬಂಧಿ ಮುಂಜಾಗ್ರತಾ ಕ್ರಮಗಳನ್ನು ವಿರೋಧಿಸಿ ನಡೆಸಿದ ‘ದಿ ಫ್ರೀಡಂ’ ರ್ಯಾಲಿಗೆ ಕ್ಯಾಲೆಬ್ ನೇತೃತ್ವ ನೀಡಿದ್ದರು.