ಒಂದೇ ದಿನ 10 ಬಾರಿ ಲಸಿಕೆ ಪಡೆದ ಭೂಪ ! ಕಾರಣವೇನು ಗೊತ್ತಾ..!?

Prasthutha|

ನ್ಯೂಜಿಲೆಂಡ್: ಕೊರೋನ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಎಲ್ಲಾ ದೇಶಗಳು ಲಸಿಕಾ ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಿವೆ. ಭಾರತದಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದ ಬಳಿಕ ಸರಿ ಸುಮಾರು 3 ತಿಂಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತಿದೆ. ಆದರೆ ನ್ಯೂಜಿಲೆಂಡ್’ನಲ್ಲಿ ವ್ಯಕ್ತಿಯೊಬ್ಬ ಒಂದೇ ದಿನ 10 ಡೋಸ್’ಗಳನ್ನು ಪಡೆದಿರುವ ಪ್ರಸಂಗವೊಂದು ವರದಿಯಾಗಿದೆ.

- Advertisement -

ಹಣದ ಮೇಲಿನ ಅತಿಯಾದ ವ್ಯಾಮೋಹದಿಂದಾಗಿ ಈ ವ್ಯಕ್ತಿ ಬೇರೆ ಬೇರೆ ವ್ಯಕ್ತಿಗಳ ‘ಪರವಾಗಿ’ ಅವರ ಹೆಸರಿನಲ್ಲಿ ಒಂದೇ ದಿನ ಹತ್ತು ಬಾರಿ ಲಸಿಕೆ ಪಡೆದಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈತನ ವರ್ತೆನಯನ್ನು ”ಮೂರ್ಖತನ ಮತ್ತು ಅಪಾಯಕಾರಿ’ ಎಂದು ಕರೆದಿರುವ ಅಧಿಕಾರಿಗಳು, ವ್ಯಕ್ತಿಯ ಹೆಸರು ಮತ್ತು ಇನ್ನಿತರ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

ನ್ಯೂಜಿಲೆಂಡ್’ನಲ್ಲಿ ಲಸಿಕೆ ಪಡೆಯಲು ಯಾವುದೇ ಗುರುತಿನ ಚೀಟಿ ತೋರಿಸಬೇಕಾಗಿಲ್ಲ. ಆದರೆ ಸಾರ್ವಜನಿಕ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಲಸಿಕೆ ಪಡೆದವರಿಗೆ ಮಾತ್ರ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ಈತನನ್ನು ‘ಬಾಡಿಗೆ’ಗೆ ನೇಮಕ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಈ ವ್ಯಕ್ತಿ ಒಂದೇ ದಿನ ಹಲವು ಲಸಿಕಾ ಕೇಂದ್ರಗಳಿಗೆ ಹೋಗಿ ಬೇರೆ ಬೇರೆ ವ್ಯಕ್ತಿಗಳ ಹೆಸರಲ್ಲಿ ಮತ್ತೆ ಮತ್ತೆ ಲಸಿಕೆ ಪಡೆದಿದ್ದಾನೆ. ಹತ್ತು ಬಾರಿ ಲಸಿಕೆ ಪಡೆದಿದ್ರೂ ಈತನ ಆರೋಗ್ಯದಲ್ಲಿ ಯಾವುದೇ ಏರು ಪೇರು ಆಗಿಲ್ಲ ಎಂಬುದೇ ವಿಶೇಷ !

- Advertisement -

ನ್ಯೂಜಿಲೆಂಡ್ ಆರೋಗ್ಯ ಮಂತ್ರಾಲಯವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್​ ತನಿಖೆಗೆ ಆದೇಶಿಸಿದೆ. ‘ಇನ್ನೊಬ್ಬರ ಸೋಗಿನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅಪಾಯಕಾರಿ. ಈ ರೀತಿ ಲಸಿಕೆ ಪಡೆಯುವುದರಿಂದ ಆರೋಗ್ಯಕ್ಕೆ ತೊಂದರೆಯಾಗಲಿದೆ. ಜೊತೆಗೆ, ಲಸಿಕೆ ಪಡೆಯದೆ ತಮ್ಮ ದಾಖಲೆಗಳಲ್ಲಿ ಲಸಿಕೆ ಪಡೆದವರೆಂದು ತೋರಿಸಿಕೊಳ್ಳುವವರೂ ತೊಂದರೆಗೆ ಒಳಗಾಗಲಿದ್ದಾರೆ ಎಂದು ನ್ಯೂಜಿಲೆಂಡ್’ನ ಲಸಿಕೀಕರಣ ನಿರ್ವಾಹಕರಾದ ಆಸ್ಟ್ರಿಡ್ ಕೂರ್​’ನೀಫ್​ ಹೇಳಿದ್ದಾರೆ.



Join Whatsapp