ವಿಧಾನ ಪರಿಷತ್ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ SDPIಗೆ ಧನ್ಯವಾದಗಳು : ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ

Prasthutha: December 12, 2021

ಕರ್ನಾಟಕ ವಿಧಾನ ಪರಿಷತ್ ಗೆ ಡಿಸಂಬರ್ 10 ರಂದು ನಡೆದ ಚುನಾವಣೆಯಲ್ಲಿ ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಡಿ ತಿಮ್ಮಯ್ಯ ಅವರಿಗೆ SDPI ಪಕ್ಷವು ಬೇಷರತ್ ಬೆಂಬಲ ನೀಡಿದ್ದಕ್ಕಾಗಿ ಪಕ್ಷಕ್ಕೆ ನಾನು ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ ಅವರು ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್ಡಿಪಿಐ ಪಕ್ಷದ ಬೆಂಬಲವನ್ನು ಕೆಲವು ಕಾರ್ಯಕರ್ತರು ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಿಡುಗಡೆಗೊಳಿಸಿದಧೃವನಾರಾಯಣ ಅವರು, SDPI ಪಕ್ಷವು ಪ್ರಸ್ತುತ ವಿಧಾನಪರಿಷತ್ ಚುನಾವಣೆ ಮಾತ್ರವಲ್ಲ, ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ವೇಳೆಯೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿತ್ತು.  ಆ ಪಕ್ಷದ ನಮಗೆ ವಿಶ್ವಾಸವಿದೆ ಹಾಗೂ ಗೌರವವಿದೆ. ಹಾಗಾಗಿ ಈ ಕುರಿತು ಯಾರೂ ಅಪಪ್ರಚಾರದಲ್ಲಿ ನಿರತರಾಗಬಾರದು ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್.ಡಿ.ಪಿ.ಐ ಪಕ್ಷದ ರಾಜ್ಯಾಧ್ಯಕ್ಷ ಶ್ರೀ.ಅಬ್ದುಲ್ ಮಜೀದ್, ಉಪಾಧ್ಯಕ್ಷ ಶ್ರೀ.ದೇವನೂರು ಪುಟ್ಟನಂಜಯ್ಯ ಹಾಗೂ ರಾಜ್ಯ ಸಮಿತಿಯ ಶ್ರೀ.ಅಮ್ಜದ್ ಖಾನ್, ಅಬ್ರಾರ್ ಅಹ್ಮದ್ ಹಾಗೂ ಮುಂತಾದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಎಸ್.ಡಿ.ಪಿ.ಐ ಪಕ್ಷದ ರಾಜ್ಯಾಧ್ಯಕ್ಷ ಶ್ರೀ.ಅಬ್ದುಲ್ ಮಜೀದ್, ಉಪಾಧ್ಯಕ್ಷ ಶ್ರೀ.ದೇವನೂರು ಪುಟ್ಟನಂಜಯ್ಯ ಹಾಗೂ ರಾಜ್ಯ ಸಮಿತಿಯ ಶ್ರೀ.ಅಮ್ಜದ್ ಖಾನ್, ಅಬ್ರಾರ್ ಅಹ್ಮದ್ ಹಾಗೂ ಮುಂತಾದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದೂ ಕೂಡಾ ಈ ವೇಳೆ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!