ಪೊಲೀಸರ ‌ಲಾಠಿ ಏಟಿಗೆ ವ್ಯಕ್ತಿ ಸಾವು

Prasthutha|

ಬೆಂಗಳೂರು: ಪೊಲೀಸರಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಾದನಾಯ್ಕನಹಳ್ಳಿಯ ಸೊಂಡೆಕೊಪ್ಪದಲ್ಲಿ ನಡೆದಿದೆ.

- Advertisement -

ಸೊಂಡೆಕೊಪ್ಪದ ಬಲರಾಮ(35) ಮೃತಪಟ್ಟವರು. ಕಳೆದ ಸೆ.19ರಂದು ಬಲರಾಮ ದೇವಸ್ಥಾನಕ್ಕೆ ಹೋಗಿ  ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ವೇಳೆ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ವಾಹನದಲ್ಲಿ ಬಂದಿದ್ದ ಪೊಲೀಸರು ಹಲ್ಲೆ ನಡೆಸಿದ್ದು,  ಪೊಲೀಸ್ ವಾಹನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

- Advertisement -

ಲಾಠಿಯಿಂದ ಬಲರಾಮ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾಗಿದ್ದ ಬಲರಾಮನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಬಲರಾಮ ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ನಡೆಸಿದ ಹಲ್ಲೆಯಿಂದಲೇ ಬಲರಾಮ ಮೃತಪಟ್ಟಿದ್ದಾನೆ ಎಂದು ಪೊಲೀಸರ ವಿರುದ್ಧ ಮೃತ ಬಲರಾಮ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆಯ ಪಿಸಿಗಳಾದ ವಿಜಯ್ ​ಕುಮಾರ್, ಜನಾರ್ದನ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ.



Join Whatsapp