ಸೌದಿ ಅರೇಬಿಯಾ 92ನೇ ನ್ಯಾಷನಲ್ ಡೇ: ಇಂಡಿಯನ್ ಸೋಷಿಯಲ್ ಫೋರಂನಿಂದ ರಕ್ತದಾನ ಶಿಬಿರ

Prasthutha|

ತಾಯಿಫ್: ಸೌದಿ ಅರೇಬಿಯಾ 92ನೇ ನ್ಯಾಷನಲ್ ಡೇ ಪ್ರಯುಕ್ತ  ಇಂಡಿಯನ್ ಸೋಷಿಯಲ್ ಫೋರಂ ತಾಯಿಫ್  ಘಟಕದ ವತಿಯಿಂದ ಬೃಹತ್ ರಕ್ತದಾನ ಶಿಬಿರವು ತಾಯಿಫ್ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ಜರುಗಿತು.

- Advertisement -

 ರಕ್ತದಾನ ಶಿಬಿರದಲ್ಲಿ ವಿಶೇಷ ಅತಿಥಿಗಳಾಗಿ ಜೆದ್ದಾ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜನಾಬ್ ಫಿರೋಝ್ ಜೆದ್ದಾ  ಆಗಮಿಸಿದ್ದರು. ಹಲವಾರು ದಾನಿಗಳು ಈ ಶಿಬಿರದಲ್ಲಿ ರಕ್ತದಾನ ಮಾಡಿದರು. ಡಾ. ಅಮೀನ್, ಡಾ.ಮನಾಫ್ ಹಾಗೂ ಡಾ.ಆಲೀ  ಈ ಕಾರ್ಯಕ್ರಮದಲ್ಲಿ ವೈದ್ಯರುಗಳಾಗಿ ಸಹಕರಿಸಿದರು. ಜನಾಬ್ ಮಲಿಕ್ ಇಡ್ಯ ಧನ್ಯವಾದ ಸಮರ್ಪಿಸಿದರು. ಕೊನೆಯಲ್ಲಿ ಇಂಡಿಯನ್ ಸೋಷಿಯಲ್ ಫೋರಂ ತಾಯಿಫ್ ಘಟಕದ ಅಧ್ಯಕ್ಷ ಜನಾಬ್ ಸಾಜಿದ್ ಗಂಜಿಮಠ ಅತಿಥಿಗಳಿಗೆ ಹಾಗೂ ವೈದ್ಯರನ್ನು ಹೂಗುಚ್ಛ ನೀಡಿ ಗೌರವಿಸಿದರು.



Join Whatsapp