ಸರಸ್ವತಿ ಪೂಜೆಗೆ ವಂತಿಗೆ ಕೊಡದ ಯುವಕನ ಹತ್ಯೆ

Prasthutha|

ಪಾಟ್ನ: ಸರಸ್ವತಿ ಪೂಜೆಗೆ ದೇಣಿಗೆ ನೀಡಿಲ್ಲ ಎಂದು ಆರೋಪಿಸಿ ಆಟೋರಿಕ್ಷಾ ಚಾಲಕನೊಬ್ಬನನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಬಿಹಾರದ ನವಾಡ ಜಿಲ್ಲೆಯ ಸಿರ್ದಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಅಕ್ಬರ್’ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಸಾ ಬಿಘಾ ಪ್ರದೇಶದ ರವೀಂದ್ರ ರಾಜವಂಶಿ ಕೊಲೆಯಾದ ಚಾಲಕ.
ಮಂಗಳವಾರ ರವೀಂದ್ರ ಅವರ ತಾಯಿ ತೀರಿಕೊಂಡಿದ್ದರಿಂದ ಕುಟುಂಬದವರನ್ನು ಆತ ಸ್ನಾನಕ್ಕೆ ಕರೆದುಕೊಂಡು ಹೋಗಿದ್ದ. ಹಿಂದಿರುಗುವಾಗ ಸಿರ್ದಾಲಾ ನರ್ಹತ್ ರಸ್ತೆಯಲ್ಲಿ ಕೆಲವು ಯುವಕರು ಸರಸ್ವತಿ ಪೂಜೆಗೆ ವಂತಿಗೆ ಕೇಳಿದ್ದಾರೆ.

- Advertisement -


ವಂತಿಗೆ ಕೊಡದ ಕಾರಣಕ್ಕೆ ಆ ಗೂಂಡಾ ಯುವಕರು ಮಾರಣಾಂತಿಕವಾಗಿ ಥಳಿಸಿ ಪರಾರಿಯಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕೂಡಲೇ ಕುಟುಂಬದವರು ರವೀಂದ್ರ ರಾಜವಂಶಿಯನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದರು, ಅಲ್ಲಿ ಮೃತಪಟ್ಟಿರುವುದಾಗಿ ಘೋಷಿಸಿದರು.
ಕೆಲವರನ್ನು ವಿಚಾರಣೆ ಮಾಡಲಾಗುತ್ತಿದೆ. ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -