ಮಧ್ಯಪ್ರದೇಶ| ಭಾರತೀಯ ವಾಯುಪಡೆಯ 2 ಜೆಟ್‌ಗಳು ಪತನ

Prasthutha|

ಭೋಪಾಲ್: ಗ್ವಾಲಿಯರ್ ಏರ್ ಫೋರ್ಸ್ ಬೇಸ್ ನಿಂದ ಟೇಕಾಫ್ ಆಗಿದ್ದ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು – ಸುಖೋಯ್ ಸು -30 ಮತ್ತು ಮಿರಾಜ್ 2000 – ತರಬೇತಿ ವೇಳೆ ಮಧ್ಯಪ್ರದೇಶದ ಮೊರೆನಾದಲ್ಲಿ  ಪತನಗೊಂಡಿವೆ.

- Advertisement -

ಮೊರೆನಾದಲ್ಲಿ ಸ್ಥಳೀಯರು ಚಿತ್ರೀಕರಿಸಿದ ವೀಡಿಯೋ ದೃಶ್ಯಗಳಲ್ಲಿ ಚದುರಿ ಬಿದ್ದಿರುವ ವಿಮಾನದ ಅವಶೇಷಗಳನ್ನು ಕಾಣಬಹುದಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

- Advertisement -

ರಾಜಸ್ಥಾನದ ಭರತ್‌ಪುರದಲ್ಲಿ ಚಾರ್ಟರ್ಡ್ ವಿಮಾನವೊಂದು ಶನಿವಾರ ಪತನಗೊಂಡಿದೆ.  

ಸ್ಥಳಕ್ಕೆ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಭೇಟಿ ನೀಡಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ರಂಜನ್ ಮಾಹಿತಿ ನೀಡಿದ್ದಾರೆ. 

Join Whatsapp