ಅಸ್ಸಾಂ: ಅಕ್ರಮ ನಿವಾಸಿಗಳನ್ನು ತೆರವುಗೊಳಿಸುವ ನೆಪದಲ್ಲಿ ಅಸ್ಸಾಂ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇದೀಗಾಗಲೇ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಅಕ್ರಮ ನಿವಾಸಿಗಳೆಂದು ಪೊಲೀಸರ ಗುಂಡೇಟಿಗೆ ಬಲಿಯಾದ 28 ವಯಸ್ಸಿನ ಮೊಯಿನುಲ್ ಹಕ್ ಅಸಲಿಗೆ ಅಕ್ರಮ ನಿವಾಸಿಯೇ ಅಲ್ಲ ಎಂದು ತಿಳಿದುಬಂದಿದೆ.
ತನ್ನ ಭೂಮಿಯಲ್ಲಿ ತರಕಾರಿ ಬೆಳೆದು ಕುಟುಂಬ ಸಾಗಿಸುತ್ತಿದ್ದ ಮೊಯಿನುಲ್ ಹಕ್ ಇವರನ್ನು ಸರಕಾರವು ಭೂಮಿ ನಿಮ್ಮದಲ್ಲ ಎಂದು ಪ್ರತಿಪಾದಿಸಿ ಸ್ಥಳಾಂತರಿಸಲು ನಿರ್ಧರಿಸಿತ್ತು. ಇದರ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದ ಮೊಯಿನುಲ್ ಹಕ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು. ಅಲ್ಲದೇ ಮೃತಪಟ್ಟ ನಂತರವೂ ಪೊಲೀಸರು ಬೂಟಿನಿಂದ ಥಳಿಸಿ ಅಮಾನವೀಯಾಗಿ ವರ್ತಿಸಿದ್ದ ದೃಶ್ಯಗಳು ವೈರಲ್ ಆಗಿ ಜನಾಕ್ರೋಶಕ್ಕೆ ಕಾರಣವಾಗಿತ್ತು.
28 ವರ್ಷದ ಮೊಯಿನುಲ್ ಅಕ್ರಮ ಭಾರತೀಯ ಎಂಬಂತೆ ಬಿಂಬಿಸಿ ಬಾಂಗ್ಲಾದೇಶದ ನಿವಾಸಿಯಾಗಿದ್ದರು ಎಂದು ಆರೋಪ ಹೊರಿಸಲಾಗಿತ್ತು, ಆದರೆ ಮೊಯಿನುಲ್ ಹಕ್ ಅವರ ಹೆಸರು NRC ಯಲ್ಲಿದ್ದು, ಆಧಾರ್ ಕಾರ್ಡ್ ಕೂಡ ಹೊಂದಿದ್ದರು ಅಲ್ಲಿನ ಪತ್ರಕರ್ತರು ದೃಢಪಡಿಸಿದ್ದಾರೆ.
ಮಗನ ಸಾವಿನ ಕುರಿತಾಗಿ ಪತ್ರಯಿಕ್ರಿಸಿರುವ ತಂದೆ ‘ನನ್ನ ಮಗನನ್ನು ಅವರು ಕೊಂದಿದ್ದಾರೆ, ನಾವು ಬಾಂಗ್ಲಾದೇಶಿಗರಾದರೆ ನಮ್ಮನ್ನು ಅಲ್ಲಿಗೆ ಕಳುಹಿಸಿಕೊಡಿ’ ಎಂದು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.