ಮಹಿಳಾ ಪೊಲೀಸರ ಕೆಲಸದ ಅವಧಿ ಕಡಿತಗೊಳಿಸಿದ ಮಹಾರಾಷ್ಟ್ರ ಸರ್ಕಾರ!

Prasthutha|

ಮುಂಬೈ: ಮಹಾರಾಷ್ಟ್ರ ಸರ್ಕಾರ ಮಹಿಳಾ ಪೊಲೀಸರ ಕೆಲಸದ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಕಡಿತಗೊಳಿಸಿದೆ.

- Advertisement -

ಈ ಕುರಿತು ಮಾಹಿತಿ ನೀಡಿದ ಮಹಾರಾಷ್ಟ್ರ ಪೊಲೀಸ್‌ ಮಹಾನಿರ್ದೇಶಕ ಸಂಜಯ್‌ ಪಾಂಡೆ, ಮಹಿಳಾ ಪೊಲೀಸರು ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸರಿದೂಗಿಸಲು ಅನುವಾಗುವಂತೆ ಅವರ ಕೆಲಸದ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಕಡಿತಗೊಳಿಸಲಾಗಿದೆ. ಕಳೆದ ತಿಂಗಳು ನಾಗ್ಪುರ, ಅಮರಾವತಿ ಮತ್ತು ಪುಣೆ ಗ್ರಾಮಾಂತರದಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ರಾಜ್ಯದ ಇತರ ನಗರಗಳು ಮತ್ತು ಜಿಲ್ಲೆಗಳಲ್ಲಿ ಇದು ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಮಹಿಳಾ ಪೊಲೀಸರಿಗೆ ವೃತ್ತಿಪರ ಕರ್ತವ್ಯಗಳಲ್ಲದೆ ಮನೆಯಲ್ಲಿ ತಮ್ಮದೇ ಆದ ಕೆಲಸಗಳು ಇರುತ್ತವೆ. ಅದಕ್ಕಾಗಿಯೇ ಒಂದು ತಿಂಗಳ ಹಿಂದೆ ಇದನ್ನು ಆರಂಭಿಸಲಾಗಿದೆ. ಇದರಿಂದ ಉತ್ತಮ ಫಲಿತಾಂಶವೂ ಬಂದಿದೆ ಎಂದು ಅವರು ಹೇಳಿದರು.

Join Whatsapp