ಸ್ವಕ್ಷೇತ್ರ ಬಿಟ್ಟು ನಂದಿಗ್ರಾಮದಲ್ಲಿ ತನ್ನ ಆಪ್ತನ ವಿರುದ್ಧವೇ ಅಖಾಡಕ್ಕಿಳಿದ ಬಂಗಾಳದ ದೀದಿ !

Prasthutha|

ದೇಶದ ಜನರ ಕಣ್ಣು ಪಶ್ಚಿಮ ಬಂಗಾಳ ಚುನಾವಣೆಯ ಮೇಲಿದೆ. ಬಿಜೆಪಿ ಪಕ್ಷ ,ದೀದಿಯ ನಾಡಲ್ಲಿ ಅಧಿಕ್ಕಾರಕ್ಕೇರಲು ಹೆಣಗಾಡುತಿದೆ. ಮಮತಾ ಬ್ಯಾನರ್ಜಿ ಅವರೇ ಶಾಸಕಿಯಾಗದಂತೆ ತಡೆದು ಆ ಮೂಲಕ ವಿಧಾನಸಭೆ ಪ್ರವೇಶಿಸದಂತೆ ಮಾಡುವ ಎಲ್ಲಾ ರೀತಿಯ ತಂತ್ರಗಾರಿಕೆ ಬಿಜೆಪಿ ನಡೆಸುತ್ತಿದೆ. ಇನ್ನೊಂದು ಕಡೆ ಟಿಎಂಸಿ ಕೂಡಾ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿದೆ.

- Advertisement -

ಏತನ್ಮಧ್ಯೆ ಮಮತಾ ಬ್ಯಾನರ್ಜಿ ಅವರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸದೆ ನಂದಿಗ್ರಾಮದಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಅದಕ್ಕೆ ಕೆಲವೊಂದು ಪ್ರಮುಖ ಕಾರಣಗಳೂ ಇದೆ. ಟಿಎಂಸಿ ಅಧಿಕಾರಕ್ಕೇರಲು ಮುಖ್ಯ ಕಾರಣ ಇದೇ ನಂದಿಗ್ರಾಮ. ಹತ್ತು ವರ್ಷಗಳ ಹಿಂದೆ ಅಲ್ಲಿ ನಡೆದ ರೈತ ಹೋರಾಟ, ಪಶ್ಚಿಮ ಬಂಗಾಳದ ರಾಜಕೀಯ ದಿಕ್ಕನ್ನೇ ಸಂಪೂರ್ಣವಾಗಿ ಬದಲಿಸಿತ್ತು
ಆದರೆ ದೀದಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದು ಬಿಜೆಪಿ ಪರ ನಂದೀಗ್ರಾಮದಲ್ಲಿ ಕಣಕ್ಕಿಳಿದ ಸುವೇಂದು ಅಧಿಕಾರಿ. ಸರ್ಕಾರ ಅಧಿಕಾರಕ್ಕೇರಲು ಮುಖ್ಯ ಕಾರಣವಾದ, ರೈತ ಹೋರಾಟದ ಮುಖ್ಯ ರೂವಾರಿಯಾಗಿದ್ದ ಸುವೇಂದು ಅವರನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಟಿಎಂಸಿಗೆ ನಂದಿಗ್ರಾಮದ ಅಂಗಳ ನಿರ್ಮಿಸಿಕೊಟ್ಟ ಸುವೇಂದು ಈಗ ಮಮತಾಗೆ ವಿರುದ್ಧವಾಗಿ ಸ್ಪರ್ಧಿಸುತ್ತಿದ್ದಾರೆ.

ಮಮತಾ ವಿರುದ್ಧ ಅವರ ಮಾಜಿ ಆಪ್ತನನ್ನೇ ಕಣಕ್ಕಿಳಿಸುವ ಮೂಲಕ ಹೊಸ ತಂತ್ರಗಾರಿಕೆಯನ್ನು ಬಿಜೆಪಿ ಹೆಣೆದು ದೀದಿಯನ್ನು ಮೂಲೆಗುಂಪಾಗಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಚುನಾವಣೆಯ ನಿಮಿತ್ತ ಹಿಂಸಾಚಾರಗಳು ಅಧಿಕಗೊಳ್ಳುವ ಬಂಗಾಳದಿಂದ ಹೊರಬೀಳುತ್ತಿರುವ ಸುದ್ದಿಗಳು ಮತ್ತಷ್ಟು ಆಘಾತ ಉಂಟುಮಾಡುತ್ತಿದೆ.

- Advertisement -