ಮಮತಾ ಬ್ಯಾನರ್ಜಿಯ ನಾದಿನಿ ರಾಜಕೀಯಕ್ಕೆ ಎಂಟ್ರಿ : ‘ಕುಟುಂಬ ರಾಜಕಾರಣ’ವೆಂದು ಕಾಲೆಳೆದ ಬಿಜೆಪಿ !

Prasthutha|

ಕೋಲ್ಕತ್ತಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧೆ

- Advertisement -

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾದಿನಿ ಕಜಾರಿ ಬ್ಯಾನರ್ಜಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಅವರು ಡಿಸೆಂಬರ್ 19 ರಂದು ನಡೆಯುವ ಕೋಲ್ಕತ್ತಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಾಗಿ ಟಿಎಂಸಿ ಈ ಹಿಂದೆ ಘೋಷಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ವಿರೋಧ ಪಕ್ಷ ಬಿಜೆಪಿ, ಮಮತಾ ಬ್ಯಾನರ್ಜಿ ನೇತೃತ್ವದ ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿದೆ ಎಂದು ಆರೋಪಿಸಿದೆ.

- Advertisement -

ಸಾಮಾಜಿಕ ಕಾರ್ಯಕರ್ತೆಯಾದ ಕಜಾರಿ ಬ್ಯಾನರ್ಜಿ, ನವೆಂಬರ್ 29 ರಂದು ವಾರ್ಡ್ ಸಂಖ್ಯೆ 73 ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನರಿಗಾಗಿ ಸೇವೆ ಸಲ್ಲಿಸುವುದಕ್ಕಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದೆ. ನನ್ನ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಮಮತಾ ಅವರು ನನಗೆ ಅವಕಾಶ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.



Join Whatsapp