ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರದ ಬದಲಿಗೆ ಮಮತಾ ಚಿತ್ರ ಹಾಕಿದ ಬಂಗಾಳ ಸರಕಾರ!

Prasthutha|

ಕೋಲ್ಕತ್ತಾ: ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಕೈಬಿಟ್ಟು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ಹೊಂದಿರುವ ಪ್ರಮಾಣಪತ್ರವನ್ನು ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

- Advertisement -

ರಾಜ್ಯ ಸರ್ಕಾರ ಹಣ ಪಾವತಿಸಿ ಖರೀದಿಸುವ ಲಸಿಕೆಯಲ್ಲಿ ಮೋದಿ ಅವರ ಚಿತ್ರವನ್ನು ಯಾಕೆ ಹಾಕಬೇಕು?. ಮೂರನೇ ಹಂತದಲ್ಲಿ ಲಸಿಕೆ ಪಡೆಯುವವರಿಗೆ ಮಮತಾ ಅವರ ಚಿತ್ರವಿರುವ ಪ್ರಮಾಣಪತ್ರ ನೀಡಲಾಗುವುದು. ಈ ಹಂತದಲ್ಲಿ, ಲಸಿಕೆಯನ್ನು 18 ರಿಂದ 44 ವರ್ಷ ವಯಸ್ಸಿನ ಜನರಿಗೆ ನೀಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಹಿಂದೆ, ಛತ್ತೀಸ್ ಗಢ ಸರ್ಕಾರವು ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನ ಮಂತ್ರಿಯವರ ಚಿತ್ರವನ್ನು ಕೈಬಿಟ್ಟು ಅದರ ಬದಲಿಗೆ ಮುಖ್ಯಮಂತ್ರಿಯವರ ಚಿತ್ರದೊಂದಿಗೆ ಲಸಿಕೆ ಪ್ರಮಾಣಪತ್ರವನ್ನು ನೀಡಿತ್ತು. ಕೇಂದ್ರದಿಂದ ಲಸಿಕೆ ಪಡೆಯುವವರು ಪ್ರಧಾನಿ ಅವರ ಭಾವಚಿತ್ರವಿರುವ ಪ್ರಮಾಣಪತ್ರವನ್ನು ಪಡೆಯುತ್ತಾರೆ. ರಾಜ್ಯ ಸರ್ಕಾರ ಖರೀದಿಸಿ ವಿತರಿಸುವ ಲಸಿಕೆಗಳಿಗೆ ಮುಖ್ಯಮಂತ್ರಿಗಳ ಭಾವಚಿತ್ರವಿರುವ ಪ್ರಮಾಣಪತ್ರವನ್ನು ಏಕೆ ನೀಡಬಾರದು ಎಂಬುದು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಶ್ ಅವರ ಪ್ರಶ್ನೆ. ಮೋದಿ ಅವರೊಂದಿಗಿನ ಪಶ್ಚಿಮ ಬಂಗಾಳ ಸರ್ಕಾರದ ನಿರಂತರ ಸಂಘರ್ಷದ ಭಾಗವಾಗಿ ಪ್ರಮಾಣಪತ್ರದಲ್ಲಿನ ಚಿತ್ರವನ್ನು ಕೈಬಿಡಲಾಗಿದೆ.

Join Whatsapp