ಮಾಲ್ಡೀವ್ಸ್ ಸಂಸತ್ ಚುನಾವಣೆ: ಮುಹಮ್ಮದ್ ಮುಯಿಝ್ಝು ನೇತೃತ್ವದ ಪಕ್ಷಕ್ಕೆ ಭರ್ಜರಿ ಗೆಲುವು

Prasthutha|

ಮಾಲ್ಡೀವ್ಸ್: ಮಾಲ್ಡೀವ್ಸ್ ನಲ್ಲಿ ಭಾನುವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

- Advertisement -


ಅಧ್ಯಕ್ಷ ಮುಯಿಝ್ಝು ಭಾರತ ವಿರೋಧಿ ನಿಲುವನ್ನು ಹೊಂದಿದ್ದು, ಇವರ ಗೆಲುವು ಭಾರತದ ಪಾಲಿಗೆ ನಿರಾಶಾದಯಕವಾಗಿದೆ. ಭಾರತ ಮೊದಲು ನೀತಿಯಿಂದ ಹೊರಬಂದು ಚೀನಾದತ್ತ ವಾಲುವ ನಿರ್ಧಾರವನ್ನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಮುಯಿಝ್ಝು ಕೈಗೊಂಡಿದ್ದರು. ಇದಕ್ಕೆ ಅಲ್ಲಿನ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಅಧ್ಯಕ್ಷರ ನಿಲುವಿಗೆ ಬಲ ಬಂದಂತಾಗಿದೆ.


ಮಾಹಿತಿಯ ಪ್ರಕಾರ, 86 ಸ್ಥಾನಗಳ ಪೈಕಿ ಪಿಎನ್ ಸಿ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಕೇವಲ 12 ಸ್ಥಾನಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದ ಸೀಟುಗಳು ಬೇರೆ ಪಕ್ಷಗಳ ಪಾಲಾಗಿದೆ.

Join Whatsapp