SDTU ಮಂಗಳೂರು ದಕ್ಷಿಣ ಕ್ಷೇತ್ರ (ಏರಿಯಾ) ಅಧ್ಯಕ್ಷರಾಗಿ ಇಕ್ಬಾಲ್ ಬೂಟ್, ಕಾರ್ಯದರ್ಶಿಯಾಗಿ ಅನ್ಸಾರ್ ಕುದ್ರೋಳಿ

Prasthutha|

ಮಂಗಳೂರು: ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ದಕ್ಷಿಣ ಕ್ಷೇತ್ರ (ಏರಿಯಾ) ಸಮಿತಿ ಪುನರಚನೆ ಶನಿವಾರ ಮಂಗಳೂರಿನಲ್ಲಿ ನಡೆಯಿತು

- Advertisement -

ಏರಿಯಾ ಅಧ್ಯಕ್ಷರಾಗಿ ಇಕ್ಬಾಲ್ ಬೂಟ್, ಉಪಾಧ್ಯಕ್ಷರಾಗಿ ಮುಸ್ತಫಾ ಪರ್ಲಿಯಾ, ಕಾರ್ಯದರ್ಶಿಯಾಗಿ ಅನ್ಸಾರ್ ಕುದ್ರೋಳಿ, ಸಹ ಕಾರ್ಯದರ್ಶಿಯಾಗಿ ಶೆರೀಫ್ ಕುತ್ತಾರ್, ಕೋಶಾಧಿಕಾರಿಯಾಗಿ ಶಮ್ಮೂನು, ಸದಸ್ಯರಾಗಿ ಇಲ್ಯಾಸ್ ಬೆಂಗರೆ, ಕಬೀರ್, ಫಿರೋಝ್ ಪಡುಬಿದ್ರೆ, ಮನ್ಸೂರ್ ಬಜಾಲ್, ಮೆಹರಾಜ್ ಪಾಂಡೇಶ್ವರ, ಅಮೀನ್ ಬಂದರ್ ರವರನ್ನು ಆಯ್ಕೆ ಮಾಡಲಾಯಿತು

SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಮಿಕರ ಶ್ರೇಯೋಭಿವ್ರದ್ಧಿಗಾಗಿ ಸರಕಾರ ಮತ್ತು ಕಾರ್ಮಿಕರ ನಡುವೆ ಒಂದು ಸೇತುವೆಯಾಗಿ ಕಾರ್ಯನಿರ್ವಹಿಸಲು ಯೂನಿಯನ್ ಕಾರ್ಮಿಕರನ್ನು ಸಂಘಟಿಸುತ್ತಿದೆ ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕು ಮತ್ತು ಅವಕಾಶಗಳ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಯೂನಿಯನ್ ನಡೆಸುತ್ತಿದೆ ಎಂದರು

Join Whatsapp