ಭಾರತೀಯ ಸೇನೆ ವಾಪಸ್‌ಗೆ ಮಾರ್ಚ್‌ 15ರ ಗಡುವು ನೀಡಿದ ಮಾಲ್ದೀವ್ಸ್‌ ಸರ್ಕಾರ

Prasthutha|

ಮಾಲೆ: ಮಾರ್ಚ್‌ 15ರ ಒಳಗೆ ತನ್ನ ಸೇನೆಯನ್ನು ವಾಪಸು ಕರೆಯಿಸಿಕೊಳ್ಳಬೇಕು ಎಂದು ದ್ವೀಪರಾಷ್ಟ್ರ ಮಾಲ್ದೀವ್ಸ್‌ ಅಧ್ಯಕ್ಷ ಮುಹಮ್ಮದ್‌ ಮುಯಿಝು ಭಾರತ ಸರ್ಕಾರಕ್ಕೆ ಕೋರಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಮಾಲ್ದೀವ್ಸ್‌‌ನಿಂದ ಸೇನೆ ವಾಪಸಾತಿ ಕುರಿತ ಚರ್ಚೆಗೆ ಮಾಲ್ದೀವ್ಸ್‌ ಮತ್ತು ಭಾರತ ಜಂಟಿಯಾಗಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಈ ಸಮಿತಿಯ ಸಭೆ ಭಾನುವಾರ ನಡೆಯಿತು ಎಂದು ಆನ್‌ಲೈನ್‌ ದೈನಿಕ ಮಾಧ್ಯಮ ವರದಿ ಮಾಡಿದೆ.

ಸದ್ಯ, ಭಾರತದ 88 ಯೋಧರು ಮಾಲ್ದೀವ್ಸ್‌ನಲ್ಲಿದ್ದಾರೆ. ಮಾರ್ಚ್‌ 15ರ ಒಳಗೆ ಸೇನೆ ವಾಪಸಾತಿಗೆ ಅಧ್ಯಕ್ಷರು ಕೋರಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಝೀಂ ಇಬ್ರಾಹಿಂ ಸುದ್ದಿಗಾರರಿಗೆ ತಿಳಿಸಿದ್ದಾರೆ‌.

- Advertisement -

‘ಭಾರತ ಸೇನೆಯ ಯೋಧರು ಮಾಲ್ದೀವ್ಸ್‌ನಲ್ಲಿ ಇರಲು ಅವಕಾಶವಿಲ್ಲ. ಇದು, ಅಧ್ಯಕ್ಷರು ಮತ್ತು ಅವರ ಸರ್ಕಾರದ ನಿರ್ಧಾರವಾಗಿದೆಎಂದು ಇಬ್ರಾಹಿಂ ಹೇಳಿದರೆಂದೂ ವರದಿ ತಿಳಿಸಿದೆ.

ಸಭೆಯಲ್ಲಿ ಭಾರತದ ರಾಯಭಾರಿ ಮುನು ಮಹಾವರ್‌ ಭಾಗವಹಿಸಿದ್ದರು. 2023ರ ನ. 17ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಮುಯಿಝು, ಭಾರತವು ಸೇನೆ ಹಿಂದೆ ಕರೆಯಿಸಿಕೊಳ್ಳಬೇಕು. ಈ ಮನವಿ ಸಲ್ಲಿಸಲು ಜನರು ತಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದು ಹೇಳಿದ್ದರು.



Join Whatsapp