ಸೌದಿ ಅರೇಬಿಯಾದಲ್ಲಿ ಮಂಗಳೂರಿನ ಮಹಿಳೆ ನಿಧನ

Prasthutha|

ದಮ್ಮಾಮ್: ಅಲ್ ಹಸ್ಸಾದಲ್ಲಿ ಕುಟುಂಬ ಸಮೇತ ವಾಸವಾಗಿದ್ದ ಮಂಗಳೂರಿನ ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮಂಗಳೂರಿನ ಕಂದಕ್ ಮೂಲದ ಉಮೈರಾ ಬಾನು ಮೃತ ಮಹಿಳೆ.

- Advertisement -

ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಳಗೊಂಡ ಪರಿಣಾಮ ಮರಣ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದ್ದಕ್ಕಿದ್ದಂತೆ ಸಕ್ಕರೆಯ ಪ್ರಮಾಣವು ಹೆಚ್ಚಳಗೊಂಡ ಉಮೈರಾ ಬಾನು(47) ಅವರನ್ನು ಕೂಡಲೇ ಅಲ್ ಹಸ್ಸಾದ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಉಮೈರಾ ಬಾನು ಪತಿ ಹಾಗೂ ಎರಡು ಮಕ್ಕಳನ್ನು ಅಗಲಿದ್ದಾರೆ.

Join Whatsapp