ಮಾಲ್ಡೀವ್ಸ್: ಭಾರತದೊಂದಿಗೆ ಮಾಡಿಕೊಂಡ ನಾಲ್ಕು ಒಪ್ಪಂದಗಳನ್ನು ಪರಿಶೀಲಿಸಲು ತನಿಖಾ ಸಮಿತಿ ರಚನೆ

Prasthutha|

ಮಾಲ್ಡೀವ್ಸ್‌: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಮತ್ತು ಅಧಿಕೃತ ಭೋಜನ ಕೂಟದಲ್ಲಿ ಭಾಗವಹಿಸಿ ಉಭಯ ದೇಶಗಳ ನಡುವಿನ ಬಾಂಧವ್ಯ ಸುಧಾರಣೆಯ ಸಂದೇಶ ರವಾನಿಸಿದ ಬೆನ್ನಿಗೇ ಅಲ್ಲಿನ ಸಂಸದೀಯ ಸಮಿತಿ ಹಿಂದಿನ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ನೇತೃತ್ವದಲ್ಲಿ ಭಾರತದೊಂದಿಗೆ ಮಾಡಿಕೊಂಡ ನಾಲ್ಕು ಒಪ್ಪಂದಗಳನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿದೆ. ಮಾಲ್ಡೀವ್ಸ್‌ನ ಸಂಸದೀಯ ಸಮಿತಿಯು ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಎಂಬ ಕಾರಣ ಉಲ್ಲೇಖಿಸಲಾಗಿದೆ.

- Advertisement -

ಸೋಲಿಹ್ ಅವರ ಆಡಳಿತದಲ್ಲಿ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಸಹಿ ಹಾಕಲಾದ ಎಲ್ಲಾ ಒಪ್ಪಂದಗಳನ್ನು ಪರಿಶೀಲಿಸುವ ಪ್ರಸ್ತಾಪವನ್ನು ಹಿತಾಧೂ ಸೆಂಟ್ರಲ್ ಸಂಸದ ಅಹ್ಮದ್ ಅಝಾನ್ ಮಾಡಿದ್ದಾರೆ.

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಒಪ್ಪಂದಗಳಲ್ಲಿ ಹೈಡ್ರೋಗ್ರಾಫಿ ಒಪ್ಪಂದ, ಭಾರತದ ಅನುದಾನದ ನೆರವಿನೊಂದಿಗೆ ನಿರ್ಮಿಸಲಾಗುತ್ತಿರುವ ಉತುರು ತಿಲಫಲ್ಹು (UTF) ಡಾಕ್‌ಯಾರ್ಡ್ ಮತ್ತು ಮಾನವೀಯ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಭಾರತವು ಮಾಲ್ಡೀವ್ಸ್ ರಕ್ಷಣಾ ಪಡೆಗಳಿಗೆ ಉಡುಗೊರೆಯಾಗಿ ನೀಡಿದ ಡೋರ್ನಿಯರ್ ವಿಮಾನಗಳನ್ನು ಒಳಗೊಂಡಿದೆ.



Join Whatsapp