ವಿಕೃತಿ ಮೆರೆದ ಮಲಯಾಳಂ ನಟ ಶ್ರೀಜಿತ್ ಬಂಧನ

Prasthutha|

ತಿರುವನಂತಪುರಂ:  ಅಪ್ರಾಪ್ತ ಬಾಲಕಿಯರಿಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪದಡಿಯಲ್ಲಿ ಮಲಯಾಳಂ ನಟ ಶ್ರೀಜಿತ್ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಟ ಶ್ರೀಜಿತ್ ರವಿ ವಿರುದ್ಧ ಇದೀಗ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

ಇಬ್ಬರು ಅಪ್ರಾಪ್ತ ಬಾಲಕಿಯರು ನಿಂತಿದ್ದ ವೇಳೆ ತನ್ನ ಕಾರಿನಲ್ಲಿ ಕುಳಿತಿದ್ದ ಶ್ರೀಜಿತ್ ಕಾರಿನಿಂದ ಕೆಳಗಿಳಿದು ಗುಪ್ತಾಂಗವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದ್ದು ಕಳೆದ ಜು. 4 ರಂದು ತ್ರಿಶೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.   ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ ನಂತರ ಪೊಲೀಸರು ರವಿ ಅವರನ್ನು ಬಂಧಿಸಿದ್ದಾರೆ.

- Advertisement -

ಶ್ರೀಜಿತ್ ರವಿ ಈ ರೀತಿ ವರ್ತಿಸಿರುವುದು ಇದೇ ಮೊದಲೆನಲ್ಲ. 2014 ರಲ್ಲೂ  ಇದೇ ರೀತಿಯ ಪ್ರಕರಣ ಶ್ರೀಜಿತ್ ರವಿ ಮೇಲೆ ದಾಖಲಾಗಿತ್ತು. ಪಾಲಕ್ಕಾಡ್ ನಲ್ಲಿ 14 ಮಂದಿ ಶಾಲಾ ವಿದ್ಯಾರ್ಥಿನಿಯರ ಗುಂಪಿನ ನಡುವೆ ಸಾರ್ವಜನಿಕವಾಗಿ ತಮ್ಮ ಗುಪ್ತಾಂಗ ಪ್ರದರ್ಶಿಸಿದ್ದರು. ಈ ವೇಳೆಯೂ ಶ್ರೀಜಿತ್ ರವಿ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನು ನೀಡಲಾಗಿತ್ತು.

ಆರೋಪವನ್ನು ನಟ ಶ್ರೀಜಿತ್ ಒಪ್ಪಿಕೊಂಡಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ.



Join Whatsapp