ಮಳಲಿ ಮಸೀದಿ ವಿಚಾರ: ಜೂ.6 ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

Prasthutha|

►ಇಂದಿನ ವಿಚಾರಣೆಯ ಪ್ರಮುಖ ಹೈಲೆಟ್ಸ್

- Advertisement -

ಮಂಗಳೂರು: ಮಳಲಿ ಮಸೀದಿ ಅರ್ಜಿ ವಿಚಾರಣೆಯನ್ನು ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಜೂ.6 ಕ್ಕೆ ಮುಂದೂಡಿದೆ.

ಮಳಲಿ ಮಸೀದಿ ಅರ್ಜಿ ವಿಚಾರಣೆಯ ಪ್ರಮುಖ ಹೈಲೆಟ್ಸ್

- Advertisement -

ವಿಎಚ್ ಪಿ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡನೆ ನಡೆಸಿದ್ದು, ಇಸ್ಲಾಮಿನ ಪ್ರಕಾರ ನಮಾಜ್ ಎಲ್ಲಿ ಬೇಕಾದರೂ ಮಾಡಬಹುದು. ಸರ್ವೇ ಮಾಡೋದು ಕಡ್ಡಾಯ. ಸರ್ವೇ ಮಾಡಲು ನ್ಯಾಯಾಲಯ ತಕ್ಷಣ ಆದೇಶ ನೀಡಬೇಕು. ಜ್ಞಾನವ್ಯಾಪಿಯಂತೆಯೇ ಈ ಮಳಲಿ ಮಸೀದಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಜ್ಞಾನ ವ್ಯಾಪಿಯಂತೆಯೇ ಮಳಲಿ ಮಸೀದಿಯಲ್ಲಿಯೂ ಚಿತ್ರೀಕರಣ ಮಾಡಬೇಕು ಎಂದಿದ್ದಾರೆ.

ವಿಎಚ್ ಪಿ ಪರ ವಕೀಲರ ವಾದಕ್ಕೆ ಮಸೀದಿ ಕಮಿಟಿ ವಕೀಲ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಮಸೀದಿ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಇಲ್ಲಿ ಇಬ್ಬರು ಹಿಂದೂಗಳು ಅರ್ಜಿ ಹಾಕಿದ್ದಾರೆ. ಹೀಗಾಗಿ ಇದು ಇಡೀ ಹಿಂದೂ ಸಮಾಜದ ಅರ್ಜಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದನ್ನು ಜ್ಞಾನವ್ಯಾಪಿಗೆ ಹೋಲಿಸಬಾರದು. ಹಲವಾರು ವರ್ಷಗಳ ಹಿಂದೆ ಮಳಲಿ ದರ್ಗಾದ ಶೈಲಿಯಲ್ಲೇ ದರ್ಗಾಗಳು ನಿರ್ಮಾಣ ಆಗುತ್ತಿತ್ತು. ವಕ್ಫ್ ಬೋರ್ಡ್ ಜಮೀನು ಆಗಿರುವುದರಿಂದ ಈ ಕೋರ್ಟಿಗೆ ಈ ವಿಚಾರದ ವಿಚಾರಣೆ ನಡೆಸಲು ಅಧಿಕಾರ ಇಲ್ಲ. ದೂರುದಾರರು ನಮ್ಮ ಪಿರ್ತಾಜಿತ ಆಸ್ತಿ ಎಂದಿದ್ದರೂ ಅವರಲ್ಲಿ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.


ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಮಧ್ಯಾಹ್ನ ಬಳಿಕ ಮತ್ತೆ ವಿಚಾರಣೆ ಮುಂದುವರೆದಿದ್ದು, ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ವಾದ ಮಂಡಿಸಿದ್ದಾರೆ. ಇಸ್ಲಾಂನ ಪ್ರಕಾರ ನಮಾಜ್ ಎಲ್ಲಿ ಬೇಕಾದರೂ ಮಾಡಬಹುದು. ಸರ್ವೇ ಮಾಡಲು ನ್ಯಾಯಲಯ ತಕ್ಷಣ ಆದೇಶಿಸಬೇಕು. ಜ್ಞಾನವಾಪಿಯಂತೆಯೇ ಈ ಮಳಲಿ ದರ್ಗಾವನ್ನು ಗಣನೆಗೆ ತೆಗೆದುಕೊಳ್ಳಬೇಕು. ಜ್ಞಾನವಾಪಿಯಂತೆಯೇ ಮಳಲಿ ದರ್ಗಾದಲ್ಲಿಯೂ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದಿದ್ದಾರೆ.

ಆದರೆ ಮಸೀದಿ ಜಾಗದ ಸರ್ವೇ ಮನವಿಗೆ ದರ್ಗಾ ಕಮಿಟಿ ವಕೀಲ ಎಂ.ಪಿ.ಶೆಣೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿ.ಎಚ್.ಪಿ ಪರ ವಕೀಲರ ಮನವಿ ಪುರಸ್ಕರಿಸ ಬಾರದು. ಮಳಲಿ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಲವು ವರ್ಷಗಳಿಂದ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದಾರೆ. ಅಲ್ಲದೇ ಈ ಜಾಗದಲ್ಲಿ ದಫನ ಭೂಮಿ ಇದ್ದು, ಎಲ್ಲದಕ್ಕೂ ದಾಖಲೆ ಇದೆ.
ಸ್ಥಳೀಯ ಪಂಚಾಯತ್ ಅನುಮತಿ ಪಡೆದು ನವೀಕರಣ ಮಾಡಲಾಗುತ್ತಿದೆ. ಕೇವಲ ವಾಸ್ತುಶಿಲ್ಪ ಹಿಂದೂ ದೇವಸ್ಥಾನದಂತಿದೆ ಅನ್ನೋ ವಾದ ಸರಿಯಲ್ಲ. ಇದು ವಕ್ಫ್ ಆಸ್ತಿ, ಸರ್ಕಾರದ ದಾಖಲೆಯಲ್ಲೂ ಉಲ್ಲೇಖ ಇದೆ. ವಕ್ಫ್ ಆಸ್ತಿ ಆಗಿರುವುದರಿಂದ ಈ ಕೋರ್ಟಿಗೆ ಈ ವಿಚಾರದ ವಿಚಾರಣೆ ನಡೆಸಲು ಅಧಿಕಾರ ಇಲ್ಲ. ಮಳಲಿ ಮಸೀದಿಯನ್ನು ಜ್ಞಾನವಾಪಿ ಪ್ರಕರಣಕ್ಕೆ ಹೋಲಿಕೆ ಸರಿಯಲ್ಲ. ಕೋರ್ಟ್ ಕಮಿಷನರ್ ನೇಮಿಸಿ ಸರ್ವೇ ಮಾಡುವ ಮನವಿ ತಿರಸ್ಕರಿಸಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Join Whatsapp