ಪ್ಯಾಲೆಸ್ತೀನ್’ಗೆ 3 ಲಕ್ಷ ಡಾಲರ್ ದೇಣಿಗೆ ನೀಡಿದ ಮಲಾಲಾ ಯೂಸುಫ್

Prasthutha|

ಜೆರುಸಲೇಂ: ಗಾಝಾದ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ರಾಕೆಟ್ ದಾಳಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ವಿಷಾದ ವ್ಯಕ್ತಪಡಿಸಿದ್ದಾರೆ.

- Advertisement -


ಈ ಬಿಕ್ಕಟ್ಟಿನ ಸಮಯದಲ್ಲಿ ಅವರು ಪ್ಯಾಲೆಸ್ತೀನ್ ಜನರಿಗೆ ಸಹಾಯ ಮಾಡುವ ಮೂರು ದತ್ತಿ ಸಂಸ್ಥೆಗಳಿಗೆ 3 ಲಕ್ಷ ಡಾಲರ್ (ರೂ. 2.5 ಕೋಟಿ) ದೇಣಿಗೆ ನೀಡುವುದಾಗಿ ಘೋಷಿಸಿದರು.


ಈ ಕುರಿತು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಮಲಾಲಾ, ಗಾಝಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಬಾಂಬ್ ದಾಳಿಯಿಂದ ಗಾಬರಿಯಾಗಿದೆ. ಈ ಕೃತ್ಯವನ್ನು ಖಂಡಿಸುತ್ತೇನೆ. ಇಸ್ರೇಲ್, ಪ್ಯಾಲೆಸ್ಟೈನ್ ಮತ್ತು ಪ್ರಪಂಚದಾದ್ಯಂತ ಶಾಂತಿಯನ್ನು ಬಯಸುವ ಜನರೊಂದಿಗೆ ನಾನು ಸೇರುತ್ತೇನೆ. ಸಾಮೂಹಿಕ ಶಿಕ್ಷೆ ಪರಿಹಾರವಲ್ಲ. ಗಾಝಾದ ಅರ್ಧದಷ್ಟು ಜನಸಂಖ್ಯೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರು ತಮ್ಮ ಇಡೀ ಜೀವನದುದ್ದಕ್ಕೂ ಬಾಂಬ್ ಸ್ಫೋಟಗಳ ಮಧ್ಯೆ ಬದುಕಬಾರದು ಎಂದು ಹೇಳಿದ್ದಾರೆ.

- Advertisement -