ಗಾಝಾಗೆ 100 ಮಿಲಿಯನ್ ಡಾಲರ್ ತುರ್ತು ನೆರವು ಘೋಷಿಸಿದ ಗಲ್ಫ್ ರಾಷ್ಟ್ರಗಳು

Prasthutha|

ಮಸ್ಕತ್: ಗಲ್ಫ್ ಸಹಕಾರ ಮಂಡಳಿ ಗಾಝಾ ಪಟ್ಟಿಗೆ 100 ಮಿಲಿಯನ್ ಡಾಲರ್ ತುರ್ತು ನೆರವು ಘೋಷಿಸಿದೆ.

- Advertisement -

ಮಸ್ಕತ್ ನಲ್ಲಿ ನಡೆದ ಸಭೆಯ ಬಳಿಕ, ವಿದೇಶಾಂಗ ಸಚಿವರು 100 ಮಿಲಿಯನ್ ಡಾಲರ್ ಮೌಲ್ಯದ ಪರಿಹಾರ ನೆರವು” ನೊಂದಿಗೆ “ತುರ್ತು ಮಾನವೀಯ ಪರಿಹಾರ ಕಾರ್ಯಾಚರಣೆ” ಯನ್ನು ನೀಡುವ ಪ್ರತಿಜ್ಞೆ ಮಾಡಿದರು.

ಬಹ್ರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಭೆಯ ಅಂತ್ಯದಲ್ಲಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ‘ಈ ನೆರವಿನ ತುರ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು’ ಒತ್ತಿಹೇಳಲಾಗಿದೆ



Join Whatsapp