ಪ್ರವಾದಿ ಅವಹೇಳನ: ಜುಮಾ ಖುತ್ಬಾದಲ್ಲೇ ಖಂಡಿಸಿದ ಮಕ್ಕಾ ಇಮಾಮ್

Prasthutha|

ಮಕ್ಕಾ: ಭಾರತದಲ್ಲಿ ಆಡಳಿತರೂಢ ಬಿಜೆಪಿಯ ಮುಖಂಡರು ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಡೆಯನ್ನು ಪವಿತ್ರ ಮಕ್ಕಾ ಮಸ್ಜಿದ್’ನ ಇಮಾಮ್ ಶೇಖ್ ಅಬ್ದುಲ್ಲಾ ಅವಾದ್ ಅಲ್ ಜುಹಾನ್ ಅವರು ಶುಕ್ರವಾರ ಖುತ್ಬಾದಲ್ಲಿ ಕಟುಶಬ್ದಗಳಿಂದ ಖಂಡಿಸಿದ್ದಾರೆ.

- Advertisement -

“ಪ್ರವಾದಿಗಳು ಮತ್ತು ಸಂದೇಶವಾಹಕರನ್ನು ಅವಮಾನಿಸುವುದು ಅಪರಾಧ ಮತ್ತು ಅಲ್ಲಾಹನ ಕಾನೂನಿನ ಪ್ರಕಾರ ಖಂಡಿಸಬೇಕು” ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರದ ಜುಮ್ಮಾ ಖುತ್ಬಾದ ವೇಳೆ ಮಕ್ಕಾ ಮಸೀದಿಯ ಮಿನ್’ಬರ್ ನಲ್ಲಿ ಭಾರತದಲ್ಲಿ ಪ್ರವಾದಿಯನ್ನು ಅವಮಾನಿಸಿದ ಹೇಳಿಕೆಯನ್ನು ಖಂಡಿಸಿ ವಿಶ್ವದ ಗಮನ ಸೆಳೆದಿದ್ದಾರೆ.

- Advertisement -

ಇತ್ತೀಚೆಗೆ ಆಡಳಿತರೂಢ ಬಿಜೆಪಿಯ ಮುಖಂಡರಾದ ನವೀನ್ ಜಿಂದಾಲ್ ಮತ್ತು ನೂಪುರ್ ಶರ್ಮಾ ಅವರು ಪ್ರವಾದಿಯನ್ನು ಅವಹೇಳನ ಮಾಡಿ ಹೇಳಿಕೆ ನೀಡಿದ್ದು, ಇದನ್ನು ಖಂಡಿಸಿ ಜಾಗತಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ವಿರುದ್ಧ ಮುಸ್ಲಿಮರು ಭಾರತದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದರು.



Join Whatsapp