ಪುಲ್ವಾಮ ದಾಳಿಯಲ್ಲಿ ಹುತಾತ್ಮರಾಗಿದ್ದ ಮೇಜರ್‌ ಧೌಂಡಿಯಾಲ್‌ ರ ಪತ್ನಿ ನಿಕಿತಾ ಕೂಡ ಈಗ ಸೇನೆಗೆ ಸೇರ್ಪಡೆ

Prasthutha|

ಶ್ರೀನಗರ : 2019ರಲ್ಲಿ 55 ರಾಷ್ಟ್ರೀಯ ರೈಫಲ್ಸ್‌ ನಲ್ಲಿ ಸೇವೆಯಲ್ಲಿ ನಿಯೋಜಿತರಾಗಿದ್ದ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಾಲ್‌ ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾಗಿದ್ದರು. ಪುಲ್ವಾಮದಲ್ಲಿ ಸಿಆರ್‌ ಪಿಎಫ್‌ ನ ೪೦ ಯೋಧರು ಕಾರ್‌ ಬಾಂಬ್‌ ದಾಳಿಯಲ್ಲಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮೇಜರ್‌ ವಿಭೂತಿ ಶಂಕರ್‌ ಹುತಾತ್ಮರಾಗಿದ್ದರು.

- Advertisement -

ಆದರೆ, ದೊಡ್ಡ ದುರಂತ ಏನೆಂದರೆ, ಮೇಜರ್‌ ವಿಭೂತಿ ಶಂಕರ್‌ ಹುತಾತ್ಮರಾಗುವ ವೇಳೆ ಅವರಿಗೆ ವಿವಾಹವಾಗಿ ಕೇವಲ ಒಂಬತ್ತು ತಿಂಗಳುಗಳಾಗಿದ್ದವು. ಅವರ 27 ವರ್ಷದ ನಿಕಿತಾ ಕೌಲ್‌ ಧೌಂಡಿಯಾಲ್‌ ಈ ಘಟನೆಯಿಂದ ದೊಡ್ಡ ಆಘಾತಕ್ಕೊಳಗಾಗಿದ್ದರು.

ಆದರೆ, ಮೇಜರ್‌ ವಿಭೂತಿ ಶಂಕರ್‌ ರ ಬಲಿದಾನವನ್ನು ವ್ಯರ್ಥವಾಗಲು ಬಿಡದ ಅವರ ಧರ್ಮಪತ್ನಿ ನಿಕಿತಾ ಕೇವಲ ಆರು ತಿಂಗಳಲ್ಲಿಯೇ ಸುಧಾರಿಸಿಕೊಂಡು, ಎಸ್‌ ಎಸ್ ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದರು. ಪರೀಕ್ಷೆ ತೇರ್ಗಡೆಯಾದ ಅವರು ಸರ್ವಿಸ್‌ ಸೆಲೆಕ್ಷನ್‌ ಬೋರ್ಡ್‌ (ಎಸ್‌ ಎಸ್‌ ಬಿ) ಸಂದರ್ಶನವನ್ನೂ ಯಶಸ್ವಿಯಾಗಿ ಪೂರೈಸಿದರು.

- Advertisement -

ಬಳಿಕ ಚೆನ್ನೈನ ಆಫಿಸರ್ಸ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿಗೂ ಸೇರ್ಪಡೆಯಾದರು. ಇದೀಗ ಅವರು ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಅರ್ಹರಾಗಿದ್ದಾರೆ. ಲೆಫ್ಟಿನೆಂಟ್‌ ನಿಕಿತಾ ಕೌಲ್‌ ಧೌಂಡಿಯಾಲ್‌ ಮೇ 29ರಿಂದ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದಾರೆ.

ಸೇನೆಯಲ್ಲಿದ್ದು ತಮ್ಮವರನ್ನು ಕಳೆದುಕೊಂಡವರಿಗೆ ನಿಕಿತಾ ನಿಜಕ್ಕೂ ದೊಡ್ಡ ಸ್ಫೂರ್ತಿಯಾಗಿದ್ದಾರೆ.



Join Whatsapp