ದೇವಸ್ಥಾನ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮಹಿಷ ದಸರಾ ಆಚರಣೆ ಸಮಿತಿ

Prasthutha|

ಮೈಸೂರು: ನಂಜನಗೂಡು ತಾಲ್ಲೂಕಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ನಡೆದ ಧನುರ್ಮಾಸ ಪೂಜೆಯಲ್ಲಿ ಮಹಿಷಾಸುರನಿಗೆ ಅವಮಾನ ಮಾಡಲಾಗಿದ್ದು, ದೇವಸ್ಥಾನ ಮಂಡಳಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯನ್ನು ಸದಾ ಅಗೌರವಿಸುವ ಕೆಲಸ ಸುಡುವ ಆಗುತ್ತಿದೆ. ನಂಜನಗೂಡು ದೇವಸ್ಥಾನ ಮಂಡಳಿಯಿಂದ ಆಚರಣೆ ಹೆಸರಲ್ಲಿ ಮಹಿಷಾಸುರ ಚಿತ್ರಗಳನ್ನು ರಸ್ತೆ ಮೇಲೆ ರಂಗೋಲಿಯಂತೆ ಬಿಡಿಸಿ, ಭಾವಚಿತ್ರದ ಬ್ಯಾನರ್ ಹಾಸಿ ತುಳಿದುಹೋಗುವ ವಿಕೃತಿ ತೋರಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಜಾರಿಯಾಗಬೇಕು ಎಂದು ಇದೇ ಸಮಯದಲ್ಲಿ ಒತ್ತಾಯಿಸಿದ ಅವರು, ಅದನ್ನು ಬಹಿರಂಗಪಡಿಸದಿದ್ದರೆ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಕಾಂತರಾಜ್ ವರದಿ ಜಾರಿ ಮಾಡುವ ಶಕ್ತಿ ಇದ್ದರೆ, ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರ. ಕೂಡಲೇ ಅದನ್ನು ಮಾಡಬೇಕು ಎಂದು ಹೇಳಿದ್ದಾರೆ.

- Advertisement -

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕ್ರಮವಾಗಲಿ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಸಂಕೀರ್ತನ ಯಾತ್ರೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಸಲ್ಮಾನ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಲೈಂಗಿಕವಾಗಿ ನಿಂದಿಸಿದ್ದಾರೆ. ಜನರನ್ನು ಪ್ರಚೋದಿಸಿದ್ದಾರೆ. ಅವರ ವಿರುದ್ಧ ಕ್ರಮವಾಗಲಿ ಎಂದೂಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಆಗ್ರಹಿಸಿದ್ದಾರೆ.

ಅಹಿಂದ ಮುಖಂಡ ಜವರಪ್ಪ, ಪತ್ರಕರ್ತ ಸೋಮಯ್ಯ ಮಲೆಯೂರು, ಲೇಖಕ ಸಿದ್ದಸ್ವಾಮಿ, ವಿ.ಸಿ.ನಾರಾಯಣ ಉಪಸ್ಥಿತರಿದ್ದರು



Join Whatsapp