ಗುಜರಾತಿಗಳನ್ನು ಖಾಲಿ ಮಾಡಿದರೆ ಮಹಾರಾಷ್ಟ್ರದಲ್ಲಿ ಬಂಡವಾಳ ಇರಲ್ಲ: ವಿವಾದವಾಯಿತು ರಾಜ್ಯಪಾಲರ ಹೇಳಿಕೆ

Prasthutha|

ಮುಂಬೈ: ಗುಜರಾತ್, ರಾಜಸ್ಥಾನ್ ರಾಜ್ಯದ ಪ್ರಜೆಗಳನ್ನು ಮಹಾರಾಷ್ಟ್ರದಿಂದ ಖಾಲಿ ಮಾಡಿಸಿದರೆ ಇಲ್ಲಿ ಯಾವುದೇ ಬಂಡವಾಳ ಇರುವುದಿಲ್ಲ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಹೇಳಿಕೆ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ . ರಾಜ್ಯಪಾಲರ ಈ ಹೇಳಿಕೆ ವಿವಾದವಾಗಿದೆ.

- Advertisement -

ಮಹಾರಾಷ್ಟ್ರದಿಂದ ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಗುಜರಾತ್, ರಾಜಸ್ಥಾನ್ ಪ್ರಜೆಗಳನ್ನು ಹೊರ ಹಾಕಿದರೆ ಇಲ್ಲಿ ಯಾವುದೇ ಬಂಡವಾಳ ಬಾಕಿಯಿರುವುದಿಲ್ಲ. ಇದರೊಂದಿಗೆ ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಮುಂಬೈಯನ್ನು ದೇಶದ ಆರ್ಥಿಕ ರಾಜಧಾನಿಯಾಗಿ ಮಾಡಲು ಮಾರ್ವಾಡಿಗಳು ಮತ್ತು ಗುಜರಾತಿಗಳ ಪರಿಶ್ರಮವನ್ನು ಕೊಶ್ಯಾರಿ ಅವರು ಶ್ಲಾಘಿಸಿದ್ದಾರೆ ಎಂದು ರಾಜಭವನದ ಮೂಲಗಳಿಂದ ತಿಳಿದು ಬಂದಿವೆ.

- Advertisement -

ಈ ಮಧ್ಯೆ ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷ ಕೊಶ್ಯಾರಿ ಅವರ ಕಟುಶಬ್ದಗಳಿಂದ ಟೀಕಿಸಿದ್ದು, ರಾಜ್ಯಪಾಲರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ಸಂಜಯ್ ರಾವತ್, ಕಷ್ಟಪಟ್ಟು ದುಡಿಯುವ ಮರಾಠಿ ಸಮುದಾಯವನ್ನು ರಾಜ್ಯಪಾಲರು ಅವಮಾನ ನಡೆಸಿದ್ದಾರೆ ಎಂದು ದೂರಿದ್ದಾರೆ. ಬಿಜೆಪಿ ಬೆಂಬಲಿತ ಮುಖ್ಯಮಂತ್ರಿ ಅಧಿಕಾರಕ್ಕೇರಿದ ಕೂಡಲೇ ಮರಾಠಿಗರಿಗೆ ಅವಮಾನವಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Join Whatsapp