ಮಂಗಳೂರಿನಲ್ಲಿ ಅಹಿತಕರ ಘಟನೆ: ಕೇರಳ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Prasthutha|

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಕೇರಳ ಗಡಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ತಲಪಾಡಿ ಚೆಕ್ ಪೋಸ್ಟ್’ನಲ್ಲಿ ಕೇರಳದಿಂದ ಮಂಗಳೂರು ತಲುಪುವ ಎಲ್ಲಾ ವಾಹನಗಳ ತಪಾಸಣೆಯನ್ನು ನಡೆಸಲಾಗುತ್ತಿದೆ. ಈ ಮಧ್ಯೆ ಮಂಗಳೂರಿನಿಂದ ಕೇರಳ ಪ್ರವೇಶಿಸುವ ವಾಹನಗಳನ್ನು ಕೂಡ ಕೇರಳ ಪೊಲೀಸರು ತಪಾಸಣೆ ಆರಂಭಿಸಿದ್ದಾರೆ.

- Advertisement -

ಕೇರಳ – ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ, ದೇವಿಪುರ, ನೆತ್ತಿಲಪದವು ಸಮೀಪ ಪೊಲೀಸರು ಕೂಬಿಂಗ್ ಬಿಗಿಗೊಳಿಸಿದ್ದು, ನೆತ್ತಿಲಪದವು, ಕೆದುಂಬಾಡಿಯಲ್ಲಿ ಕೊಣಾಜೆ ಠಾಣೆಯ ಪೊಲೀಸರು ಚೆಕ್ಕಿಂಗ್ ನಡೆಸುತ್ತಿದ್ದರೆ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳ್ಳಾಲ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ.
ಮಂಜೇಶ್ವರ ಪೊಲೀಸರು ತಲಪಾಡಿ ಗಡಿಯಲ್ಲಿ ಮಂಗಳೂರಿನಿಂದ ನಿರ್ಗಮಿಸುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ತಲಪಾಡಿ ಗಡಿಯಲ್ಲಿ ಸುಮಾರು 20ಕ್ಕೂ ಅಧಿಕ ಉಳ್ಳಾಲ, ಕೆ.ಎಸ್.ಆರ್.ಪಿ. ಮತ್ತು ಟ್ರಾಫಿಕ್ ಪೊಲೀಸರು ತಪಾಸಣೆಯಲ್ಲಿ ನಿರತರಾಗಿದ್ದಾರೆ.

ಉಳ್ಳಾಲದಲ್ಲಿ ಪೊಲೀಸ್ ಬಂದೋಬಸ್ತ್ ಮಧ್ಯೆ ಸಂಜೆ 6 ಗಂಟೆಯ ತನಕ ಅಂಗಡಿಗಳು ಎಂದಿನಂತೆ ತೆರೆಯಲಾಗಿತ್ತು. ಸಂಜೆಯ ವೇಳೆಗೆ ಎಲ್ಲಾ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದು, ತೊಕ್ಕೊಟ್ಟು ಮತ್ತು ಉಳ್ಳಾಲ ಪ್ರವೇಶಿಸುವ ಬ್ರಿಡ್ಜ್ ಸಮೀಪ ನಾಕಾಬಂಧಿ ಹಾಕಿದ್ದು, ತೊಕ್ಕೊಟ್ಟು ಜಂಕ್ಷನ್’ಗೆ ಬರುವ ವಾಹನಗಳ ಮೇಲೆ ನಿರ್ಬಂಧ ಹೇರಲಾಗಿದೆ.

- Advertisement -

Join Whatsapp